ಪ್ರತಿ ಕೆಜಿ ತ್ಯಾಜ್ಯಕ್ಕೆ 12 ರೂ. ಸೆಸ್ ವಿಧಿಸಲು ಮುಂದಾದ ಬಿಬಿಎಂಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಿನ ಕಳೆಯುತ್ತಿದ್ದಂತೆ ನಗರದಲ್ಲಿ ಜೀವನ ದುಬಾರಿಯಾಗುತ್ತಿದೆ. ತಿನ್ನುವ ಅನ್ನದಿಂದ ಹಿಡಿದು ಧರಿಸೋ ಚಪ್ಪಲಿವರೆಗೂ ಎಲ್ಲವೂ ತುಟ್ಟಿಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿದೆ. ತರಕಾರಿ ದರವೂ ಗಗನಕ್ಕೆ ಮುಟ್ಟಿದೆ. ಇದರ ಜೊತೆಗೆ ಕಸದ ಹೆಸರಲ್ಲಿ ಬೆಂಗಳೂರಿಗರ ಜೇಬಿಗೆ ಕತ್ತರಿ ಹಾಕಲು ಬಿಬಿಎಂಪಿ ಸಜ್ಜಾಗುತ್ತಿದೆ.

ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರಿಗೆ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ಸೆಸ್ ವಿಧಿಸಲು ಪಾಲಿಕೆ ಮುಂದಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಅಪಾರ್ಟ್‌ಮೆಂಟ್‌ಗಳು, ಹೋಟೆಲ್‌ಗಳು ಮತ್ತು ಮಾಲ್‌ಗಳು ಪ್ರತಿನಿತ್ಯ 100 ಕೆಜಿಗೂ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸಿ ಬಿಬಿಎಂಪಿಯ ಕಾಂಪ್ಯಾಕ್ಟರ್‌ಗಳಿಗೆ ಕಳುಹಿಸುತ್ತಿವೆ. ಇದರಿಂದ ಕಸ ಸಂಗ್ರಹ ವ್ಯವಸ್ಥೆಯ ಮೇಲೆ ಹೊರೆ ಹೆಚ್ಚುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ಉದ್ದೇಶಿತ ಸೆಸ್ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ ಎಂದು ಹೇಳಿದರು.

ಘನತ್ಯಾಜ್ಯ ವಿಲೇವಾರಿ ನಿಯಮದ ಪ್ರಕಾರ ಮನೆ ಮನೆಯಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದು ಬಿಬಿಎಂಪಿ ಜವಾಬ್ದಾರಿಯಾಗಿದೆ. ಆದರೆ, ನಗರದಲ್ಲಿ ಅನಧಿಕೃತವಾಗಿ ಹೋಟೆಲ್‌ಗಳು ಸೇರಿದಂತೆ ಸಗಟು ತ್ಯಾಜ್ಯ ಉತ್ಪಾದಕರು ಬಿಬಿಎಂಪಿಗೆ ತಮ್ಮ ಕಸ ಹಾಕುತ್ತಿದ್ದಾರೆ. ಇದರಿಂದ ಬಿಬಿಎಂಪಿಗೆ ಕಸ ವಿಲೇವಾರಿ ಹೆಚ್ಚಾಗಿ ಸಮಸ್ಯೆ ಆಗುತ್ತಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!