CINE | ಈ ಸಿನಿಮಾ ರಿಲೀಸ್‌ ಆಗ್ಬಾರ್ದು! ನಟ ವಿಕ್ರಾಂತ್‌ ಮೆಸ್ಸಿಗೆ ಕೊಲೆ ಬೆದರಿಕೆ ಕರೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

‘ಮಿರ್ಜಾಪುರ್’ ವೆಬ್ ಸರಣಿ, ‘12ತ್ ಫೇಲ್’ ಸಿನಿಮಾಗಳ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ನಟ ವಿಕ್ರಾಂತ್ ಮೆಸ್ಸಿ ಇದೀಗ ‘ದಿ ಸಾಬರಮತಿ ರಿಪೋರ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರತದ ಇತಿಹಾಸದ ಕ್ರೂರ ಅಧ್ಯಾಯಗಳಲ್ಲಿ ಒಂದಾದ ಗೋಧ್ರಾ ಘಟನೆಯನ್ನು ಆಧರಿಸಿದ ಸಿನಿಮಾ ಅದಾಗಿದ್ದು, ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ನಟ ವಿಕ್ರಾಂತ್ ಮೆಸ್ಸಿಗೆ ಈ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಬೆದರಿಕೆಗಳು ಬಂದಿವೆಯಂತೆ.

ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿರುವ ವಿಕ್ರಾಂತ್ ಮಸ್ಸಿ, ‘ಹೌದು, ನನಗೆ ಸತತವಾಗಿ ಕೊಲೆ ಬೆದರಿಕೆಗಳು ಬರುತ್ತಲೇ ಇವೆ. ನನ್ನ ಇನ್​ಸ್ಟಾಗ್ರಾಂ ತೆರೆದು ನೋಡಿದರೆ ಎಲ್ಲರಿಗೂ ಅದು ತಿಳಿಯುತ್ತದೆ. ನನಗೆ ಇರಲಿ ನನ್ನ 9 ತಿಂಗಳು ಮಗುವನ್ನೂ ಬಿಡುತ್ತಿಲ್ಲ. ಮಗುವಿನ ಬಗ್ಗೆಯೂ ಸತತ ಬೆದರಿಕೆಗಳು ಬರುತ್ತಲೇ ಇವೆ. ಆದರೆ ನಾವು ಕಲಾವಿದರು, ನಮಗೆ ಕತೆ ಹೇಳುವುದಕ್ಕೆ ಬರುತ್ತದೆ ಅಷ್ಟೆ. ಅದನ್ನೇ ನಾವು ಮಾಡುತ್ತಿದ್ದೇವೆ’ ಎಂದಿದ್ದಾರೆ.

‘ಸಿನಿಮಾದ ಟ್ರೇಲರ್ ಅಷ್ಟೆ ಈಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಗೋಧ್ರಾ ಹತ್ಯಾಕಾಂಡಕ್ಕೆ ಮಾಧ್ಯಮದವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಆಧಾರವಾಗಿಟ್ಟುಕೊಂಡು ಆ ಕತೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಸಿನಿಮಾ ಸಂಪೂರ್ಣವಾಗಿ ನಿಜ ಘಟನೆಗಳ ಮೇಲೆ ಆಧಾರಿತವಾಗಿದೆ. ಸಿನಿಮಾವನ್ನು ಪ್ರೇಕ್ಷಕರು ನೋಡಿಲ್ಲ, ಈಗಲೇ ಸಿನಿಮಾದಲ್ಲಿ ಹಾಗೆ ಇರಬಹುದು, ಇಂಥಹವರನ್ನು ತಪ್ಪಿತಸ್ಥರನ್ನಾಗಿ ತೋರಿಸಿರಬಹುದು ಎಂದೆಲ್ಲ ಊಹಿಸಬೇಡಿ, ಸಿನಿಮಾ ನೋಡಿದರೆ ನಿಮಗೇ ಅದೆಲ್ಲ ಅರ್ಥವಾಗಲಿದೆ’ ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!