ಪ್ರಧಾನಿ ಮೋದಿಗೆ ಉಡುಗೊರೆಯಾಗಿ ದೊರಕಿದ 1,200 ಪರಿಕರ, ವಸ್ತು ಉಡುಗೊರೆ ಇಂದು ಹರಾಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ದೊರಕಿರುವ ಸುಮಾರು 1,200 ಪರಿಕರ, ವಸ್ತುಗಳನ್ನು ಇಂದು (ಶನಿವಾರ) ಹರಾಜು ಹಾಕಲಾಗುತ್ತದೆ.

ವಿಶೇಷವಾಗಿ ಈ ಉಡುಗೊರೆಯಲ್ಲಿ ಶಿಲ್ಪಿ ಮೈಸೂರಿನ ಯೋಗಿರಾಜ್ ಕೆತ್ತಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 2 ಅಡಿ ಎತ್ತರದ ಮೂರ್ತಿ ಹಾಗೂ ಕಾಮನ್‌ವೆಲ್ತ್ ಕ್ರೀಡೆಯ ಪದಕ ವಿಜೇತರು ನೀಡಿರುವ ವಿವಿಧ ಉಡುಗರೆಗಳು ಇದರಲ್ಲಿ ಸೇರಿವೆ.

ರೆಸ್ಟೋರೆಂಟ್‌ನಲ್ಲಿ ಭೋಜನ ಸ್ಪರ್ಧೆ

ಅಲ್ಲದೇ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ದಿಲ್ಲಿಯ ಕನಾಟ್ ಪ್ರದೇಶದಲ್ಲಿರುವ ಆರ್ಡರ್ 2.1 ರೆಸ್ಟೋರೆಂಟ್‌ನಲ್ಲಿ 10 ದಿನಗಳ ಕಾಲ 56 ಇಂಚಿನ ಥಾಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಈ ಸಮಯದಲ್ಲಿ ರೆಸ್ಟೋರೆಂಟ್‌ಗೆ ಭೇಟಿ ನೀಡುವ ಇಬ್ಬರು ಅದೃಷ್ಟಶಾಲಿಗಳಿಗೆ ಕೇದರಾನಾಥಕ್ಕೆ ಉಚಿತ ಪ್ರವಾಸದ ಅವಕಾಶ ಸಿಗಲಿದೆ . ಅದೇ ರೀತಿ 40 ನಿಮಿಷಗಳಲ್ಲಿ ಈ ಊಟ ಮಾಡಿ ಮುಗಿಸುವ ಇಬ್ಬರು ಗ್ರಾಹಕರಿಗೆ ತಲಾ 8.5 ಲಕ್ಷ ರೂ. ಬಹುಮಾನ ನೀಡುವುದಾಗಿ ಎಂದು ಮಾಲೀಕ ಸುವೀತ್ ಕಾಲ್ರಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!