ಗೂಗಲ್​​ನ ಮಾತೃಸಂಸ್ಥೆ ಆಲ್ಫಾಬೆಟ್ ಯಿಂದ 12,000 ಉದ್ಯೋಗಿಗಳು ವಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೂಗಲ್ ನ ಆಲ್ಫಾಬೆಟ್ ಇಂಕ್ (Alphabet Inc) ತನ್ನ 12,000 ಉದ್ಯೋಗಿಗಳನ್ನು ವಜಾ ಮಾಡಲಿದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ.

ಇತ್ತೀಚಿಗೆ ಮೈಕ್ರೋಸಾಫ್ಟ್ ಕಾರ್ಪೊರೇಷನ್(Microsoft Corp)10,000 ಕಾರ್ಮಿಕರನ್ನು ವಜಾಗೊಳಿಸುವುದಾಗಿ ಹೇಳಿದ್ದು, ಇದೀಗ ಆಲ್ಫಾಬೆಟ್ ಇಂಕ್​​ ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದೆ.

ಆರ್ಥಿಕ ಅನಿಶ್ಚಿತತೆ ಮತ್ತು ತಾಂತ್ರಿಕ ಭರವಸೆಯ ಅವಧಿಯಲ್ಲಿ ಇಂತಹ ಅನಿವಾರ್ಯತೆ ಕುರಿತು ಹೇಳಲಾಗುತ್ತಿದೆ.
ನಮ್ಮ ಮಿಷನ್‌ನ ಶಕ್ತಿ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯ ಮತ್ತು AI ನಲ್ಲಿನ ನಮ್ಮ ಆರಂಭಿಕ ಹೂಡಿಕೆಗಳಿಂದಾಗಿ ನಮ್ಮ ಮುಂದೆ ಇರುವ ದೊಡ್ಡ ಅವಕಾಶದ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!