Monday, June 27, 2022

Latest Posts

ರಾಷ್ಟ್ರಪತಿ, ಪ್ರಧಾನಿ ಪಾದಗಳಿಗೆ ವಂದಿಸಿ ‘ಪದ್ಮಶ್ರೀ’ ಸ್ವೀಕರಿಸಿದ 125 ವರ್ಷದ ಸ್ವಾಮಿ ಶಿವಾನಂದರು!

ಹೊಸದಿಗಂತ ಡಿಜಿಟಲ್ ಡೆಸ್ಕ್

ದೇಶದ ಅತ್ಯುನ್ನತ ಪದ್ಮ ಪ್ರಶಸ್ತಿಗಳನ್ನು ಇಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಪ್ರದಾನ ಮಾಡಿದರು. ಈ ವೇಳೆ ಪ್ರಶಸ್ತಿ ಸ್ವೀಕಾರ ಮಾಡಿರುವ 125 ವರ್ಷದ ಸ್ವಾಮಿ ಶಿವಾನಂದರ ಅವರ ವಿಡಿಯೋ ಎಲ್ಲರ ಮನಸೆಳೆದಿದೆ.
ಪದ್ಮಶ್ರೀ ಪಡೆಯಲು ಬಂದ 125 ವರ್ಷದ ಸ್ವಾಮಿ ಶಿವಾನಂದರ ಅವರು ಪ್ರಧಾನಿ ಮೋದಿ ಅವರ ಕಾಲಿಗೆ ನಮಸ್ಕರಿಸಿದ್ದು ಅಲ್ಲಿ ನೆರೆದಿದ್ದ ಎಲ್ಲರಲ್ಲಿ ಒಮ್ಮೆ ಆಶ್ವರ್ಯ ಮೂಡಿಸಿತು.
125 ವರ್ಷದ ಸ್ವಾಮಿ ಶಿವಾನಂದ ಉತ್ತರ ಪ್ರದೇಶದವರಾಗಿದ್ದು, ಯೋಗದಲ್ಲಿ ಇವರ ಮೇರು ಸಾಧನೆ ಗುರುತಿಸಿ ಮೋದಿ ಸರ್ಕಾರ ಪದ್ಮಶ್ರೀ ಘೋಷಣೆ ಮಾಡಿತ್ತು.
ಇಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದುಕೊಳ್ಳಲು ಬಂದಿದ್ದ ಅವರು, ಪ್ರಶಸ್ತಿ ಪಡೆದುಕೊಳ್ಳಲು ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಎದ್ದು ನಿಂತು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮೋದಿ ಕೂಡಾ ನಮಸ್ಕಾರ ಮಾಡಿದರು. ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರ ಬಳಿ ತೆರಳಿ ಅವರಿಗೆ ನಮಸ್ಕಾರ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss