ದಿನಭವಿಷ್ಯ | ಅನಿರೀಕ್ಷಿತವಾದದನ್ನು ನಿರೀಕ್ಷಿಸಿ! ಯಶಸ್ಸು, ಹಣ, ಕೀರ್ತಿ ಎಲ್ಲವೂ ಇಂದು ನಿಮ್ಮೆಡೆಗೆ ಉದಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಒತ್ತಡ, ಉದ್ವಿಗ್ನತೆ, ಅಸಹನೆ ಇಂದು ನಿಮ್ಮನ್ನು ಆವರಿಸುತ್ತದೆ. ಸಂಜೆ ವೇಳೆಗೆ ಪ್ರೀತಿಪಾತ್ರರ ಜತೆಗಿನ ಮಾತುಕತೆ ಇವೆಲ್ಲವನ್ನು ಮರೆಸುತ್ತದೆ.

ವೃಷಭ
ಆರೋಗ್ಯದ ಕುರಿತು ಎಚ್ಚರವಿರಲಿ. ಗಾಯ ಅಥವಾ ಅನಾರೋಗ್ಯ ಕಾಡಬಹುದು. ಹರಿತ ವಸ್ತು, ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ.

ಮಿಥುನ
ನಿಮ್ಮ ಸಿಡುಕಿನಿಂದ ಇತರರ ಮನಸ್ಸು ನೋಯಿಸಬೇಡಿ. ಇತರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿ.

ಕಟಕ
ಆತ್ಮೀಯ ಸ್ನೇಹಿತರು ಇಂದು ನಿಮ್ಮ ದಿನವನ್ನು ತುಂಬುತ್ತಾರೆ. ಉಳಿದ ಒತ್ತಡಗಳನ್ನು ಅವರು ಮರೆಸುತ್ತಾರೆ. ಕೌಟುಂಬಿಕ ಕಟ್ಟುಪಾಡು ಮರೆಯದಿರಿ.

ಸಿಂಹ
ಭಾವನಾತ್ಮಕ ಸಂಘರ್ಷ. ಒಂದು ಕ್ಷಣ ಅತಿಯಾದ ಸಂತೋಷ ಅನುಭವಿಸುವಿರಿ. ಮರುಕ್ಷಣ ಬೇಸರ ಕಾಡಬಹುದು. ಆರ್ಥಿಕ ಲಾಭ ಉಂಟಾಗಲಿದೆ.

ಕನ್ಯಾ
ನಿಮ್ಮ ಕಾರ್ಯವೈಖರಿ ನಿಮಗೆ ಶ್ಲಾಘನೆ ಹೊತ್ತು ತರುವುದು. ಸಂಜೆ ವೇಳೆಗೆ  ಮೋಜಿನ ಕಾಲಕ್ಷೇಪ. ಇನ್ನಿತರ ಒತ್ತಡಗಳನ್ನು ಮರೆತು ವ್ಯವಹರಿಸಿ.

ತುಲಾ
ನೀವು ಕೈಗೊಳ್ಳುವ ಕಾರ್ಯಕ್ಕೆ ಕುಟುಂಬಸ್ಥರ ಬೆಂಬಲದ ಅಗತ್ಯವಿದೆ. ಅನುನಯದಿಂದ ಅದನ್ನು ಪಡೆಯಿರಿ. ಅವರಿಗೆ ಅಸಮಾಧಾನ ಸೃಷ್ಟಿಸಬೇಡಿ.

ವೃಶ್ಚಿಕ
ಗ್ರಹಗತಿ ನಿಮಗಿಂದು ಪೂರಕವಾಗಿದೆ. ಸಂಘಟಿತ ಕಾರ್ಯದಿಂದ ಹೆಚ್ಚಿನ ಯಶಸ್ಸು. ಹಾಗಾಗಿ ನಾನೊಬ್ಬನೇ ಮಾಡುತ್ತೇನೆ ಎಂಬ ಧೋರಣೆ ತ್ಯಜಿಸಿ.

ಧನು
ಇತರರ ಕೆಟ್ಟ ಗುಣ ವನ್ನೂ  ಕ್ಷಮಿಸುವ, ಮರೆಯುವ ಒಳ್ಳೆತನ ತೋರುವಿರಿ. ಆದರೆ ಅದನ್ನು ಅವರು ದುರು ಪಯೋಗ ಮಾಡದಂತೆ ನೋಡಿಕೊಳ್ಳಿ.

ಮಕರ
ಒಂದೇ ಕೆಲಸವನ್ನು ನಿರಂತರವಾಗಿ ಮಾಡಲು ಬೋರ್ ಹೊಡೆಯುವುದೆ? ಹಾಗಿದ್ದರೆ ನಿಮ್ಮ ಚಿಪ್ಪಿನಿಂದ ಹೊರಬನ್ನಿ, ಹೊಸತನ ಹುಡುಕಿ.

ಕುಂಭ
ಅನಿರೀಕ್ಷಿತವಾದುದನ್ನು ನಿರೀಕ್ಷಿಸಿ. ಯಶಸ್ಸು, ಹಣ, ಕೀರ್ತಿ ಎಲ್ಲವೂ ಇಂದು ನಿಮ್ಮೆಡೆಗೆ ಉದಾರ ದೃಷ್ಟಿ ತೋರಲಿವೆ. ಇಂದು ‘ನಿಮ್ಮ ದಿನ’

ಮೀನ
ಮುಖ್ಯ ಕೆಲಸ ಪೂರೈಸಬೇಕಾಗಿದೆ. ಸಮಯ ಮೀರುತ್ತಿದೆ. ಸಣ್ಣ ವಿಷಯಗಳನ್ನೂ ಕಡೆಗಣಿಸಬೇಡಿ. ಕಾಲಮಿತಿಯಲ್ಲಿ ಕೆಲಸ ಪೂರೈಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!