ಮೂರು ತಿಂಗಳಲ್ಲಿ 13 ಕಾಲರಾ ಕೇಸ್‌, ಸ್ಟ್ರೀಟ್‌ ಫುಡ್‌ ಮಾರಾಟ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕಾಲರಾ ಪ್ರಕರಣಗಳು ಏರಿಕೆಯಾಗುತ್ತಿವೆ. ಕಳೆದ ವಾರದಲ್ಲಿಯೇ ಎಂಟು ಮಂದಿಗೆ ಕಾಲರಾ ದೃಢಪಟ್ಟಿದೆ.

ಒಟ್ಟಾರೆ ಈ ವರ್ಷದಲ್ಲಿ ಬೆಂಗಳೂರಿನಲ್ಲಿ 13 ಮಂದಿಗೆ ಕಾಲರಾ ದೃಢಪಟ್ಟಿದೆ. ಬೇಸಿಗೆಯಲ್ಲಿ ಕಲುಷಿತ ನೀರು ಪೂರೈಕೆ ಹಾಗೂ ರಸ್ತೆಬದಿ ಆಹಾರ ಸೇವನೆಯಿಂದ ಸಮಸ್ಯೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕಾಲರಾ ಹಿನ್ನೆಲೆ ರಸ್ತೆ ಬದಿ ಕತ್ತರಿಸಿದ ಹಣ್ಣು, ಹಾಗೂ ತೆರೆದ ಆಹಾರ ಮಾರಾಟವನ್ನು ಬಿಬಿಎಂಪಿ ನಿರ್ಬಂಧಿಸಿದೆ.

ಎಂಟು ವಲಯಗಳನ್ನು ನಿರ್ಬಂಧ ಮಾಡಲಾಗಿದ್ದು, ಜನರು ತಾವಾಗಿಯೇ ಎಚ್ಚೆತ್ತುಕೊಂಡು ರಸ್ತೆ ಬದಿ ಆಹಾರಗಳನ್ನು ತಿನ್ನಬಾರದು ಎಂದು ಹೇಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!