ಮಾರ್ಚ್‌ ಜಿಎಸ್‌ಟಿ ವಸೂಲಾತಿಯಲ್ಲಿ 13 ಶೇ. ಹೆಚ್ಚಳ: 1.60 ಲಕ್ಷ ಕೋಟಿ ರೂ. ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಮಾರ್ಚ್‌ನಲ್ಲಿ ಶೇ 13 ರಷ್ಟು ಏರಿಕೆಯಾಗಿ 1.60 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ಒಟ್ಟು ಜಿಎಸ್‌ಟಿ ಸಂಗ್ರಹವು 1.5 ಲಕ್ಷ ಕೋಟಿ ರೂ. ಮಟ್ಟವನ್ನು ದಾಟಿದ್ದು ಇದುವರೆಗಿನ ಎರಡನೇ ಅತಿ ಹೆಚ್ಚಿನ ಸಂಗ್ರಹವಾಗಿದೆ.

“ಮಾರ್ಚ್ 2023 ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,60,122 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಸಿಜಿಎಸ್‌ಟಿ 29,546 ಕೋಟಿ ರೂ, ಎಸ್‌ಜಿಎಸ್‌ಟಿ 37,314 ಕೋಟಿ ರೂ, ಐಜಿಎಸ್‌ಟಿ ₹82,907 ಕೋಟಿ ರೂ. ಮತ್ತು ಸೆಸ್ 10,355 ಕೋಟಿ ರೂ. ಗಳಷ್ಟಿದೆ ಆ ಮೂಲಕ ಮಾರ್ಚ್‌ ತಿಂಗಳು ಅತ್ಯಧಿಕ ಐಜಿಎಸ್‌ಟಿ ಸಂಗ್ರಹಕ್ಕೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಾರ್ಚ್ 2023 ರ ಆದಾಯವು ಕಳೆದ ವರ್ಷದ ಅದೇ ತಿಂಗಳ GST ಆದಾಯಕ್ಕಿಂತ 13 ಶೇಕಡಾ ಹೆಚ್ಚಾಗಿದೆ. ಈ ತಿಂಗಳಿನಲ್ಲಿ ಸರಕುಗಳ ಆಮದು ಆದಾಯವು 8 ಶೇ. ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 14 ಶೇಕಡಾ ಹೆಚ್ಚಾಗಿದೆ. 2022-23 ರಲ್ಲಿನ ಒಟ್ಟು ಆದಾಯವು ಕಳೆದ ವರ್ಷಕ್ಕಿಂತ 22 ಶೇಕಡಾ ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!