ತಾಲೀಬಾನ್‌ಗಳ ವಶದಲ್ಲಿ ಮೂವರು ಬ್ರಿಟೀಷ್‌ ಪ್ರಜೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೂವರು ಬ್ರಿಟಿಷ್ ಪ್ರಜೆಗಳನ್ನು ಸೆರೆಹಿಡಿದಿದ್ದಾರೆ. ಅವರಲ್ಲಿ ಇಬ್ಬರು ಕಳೆದ ಜನವರಿಯಿಂದ ಸೆರೆಯಲ್ಲಿದ್ದರೆ, ಇನ್ನೊಬ್ಬರು ಎಷ್ಟು ಸಮಯದಿಂದ ಸೆರೆಯಲ್ಲಿದ್ದಾರೆ ಎಂಬುದು ತಿಳಿದಿಲ್ಲವೆಂದು ಯುಕೆ ಮೂಲದ ಪ್ರೆಸಿಡಿಯಮ್ ನೆಟ್‌ವರ್ಕ್ ತಿಳಿಸಿದೆ. ಒತ್ತೆಯಾಳುಗಳಲ್ಲಿ ಚಾರಿಟಿ ವೈದ್ಯ ಕೆವಿನ್ ಕಾರ್ನ್‌ವೆಲ್, ಮತ್ತು ಯೂಟ್ಯೂಬ್ ಸ್ಟಾರ್ ಮೈಲ್ಸ್ ರೂಟ್‌ಲೆಡ್ಜ್ ಸೇರಿದ್ದಾರೆ. ಇತರರನ್ನು ಹೆಸರು ತಿಳಿಯದಿದ್ದರೂ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಆತನನ್ನು ಹೋಟೆಲ್ ಮ್ಯಾನೇಜರ್ ಎನ್ನಲಾಗಿದೆ.

ಏತನ್ಮಧ್ಯೆ, ಬಂಧಿತರನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಪ್ರೆಸಿಡಿಯಮ್ ನೆಟ್‌ವರ್ಕ್ ಟ್ವಿಟರ್‌ನಲ್ಲಿ ಹೇಳಿದೆ. ತಪ್ಪು ತಿಳುವಳಿಕೆಯಿಂದಾಗಿ ಅವರನ್ನು ಬಂಧಿಸಲಾಗಿದ್ದು, ಬಿಡುಗಡೆ ಮಾಡುವಂತೆ ತಾಲಿಬಾನ್‌ಗಳಿಗೆ ಸೂಚಿಸಲಾಗಿದೆ. ಕಳೆದ ವರ್ಷ, ನಾಲ್ವರು ಬ್ರಿಟಿಷ್ ಪ್ರಜೆಗಳು ಮತ್ತು ಒಬ್ಬ ಹಿರಿಯ ಟಿವಿ ಕ್ಯಾಮರಾಮನ್ ಅನ್ನು ತಾಲಿಬಾನ್ ಬಿಡುಗಡೆ ಮಾಡಿತು. ಆರು ತಿಂಗಳಿಗೂ ಹೆಚ್ಚು ಕಾಲ ಅವರನ್ನು ಸೆರೆಯಲ್ಲಿಟ್ಟಿದ್ದರು.

ಬಂಧನಕ್ಕೊಳಗಾದವರ ಕುಟುಂಬಸ್ಥರು ತಾಲಿಬಾನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏನಾದರೂ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಬೇಕು, ಆದರೆ ಈ ರೀತಿ ನಾಗರಿಕರನ್ನು ಅಪಹರಿಸುವ ಉದ್ದೇಶವೇನು? ಎಂದು ಕಿಡಿ ಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!