November 12, 2026
Thursday, November 12, 2026
spot_img

‘ಟಾಕ್ಸಿಕ್’ ಸಿನಿಮಾ ಸೋಲು ತುಂಬಾನೇ ನೋವು ತಂದಿತ್ತು: ನಟಿ ಕಿಯಾರಾ ಅಡ್ವಾಣಿ ಓಪನ್ ಟಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂಚಿಕೆಯಲ್ಲಿ ಈ ಜೋಡಿ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ ಅಭಿನಯದ ‘ಟಾಕ್ಸಿಕ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದೆ ಹೋದಾಗ ತಮಗೆ ಹಾಗೂ ಇಡೀ ತಂಡಕ್ಕೆ ತೀವ್ರ ಬೇಸರವಾಯಿತು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಮೊದಲ ದಿನವೇ ಚಿತ್ರದ ಗಲ್ಲಾಪೆಟ್ಟಿಗೆಯ ಪರಿಸ್ಥಿತಿ ನೋಡಿ ಮನಸ್ಸಿಗೆ ನೋವಾಗಿದ್ದರೂ, ತಮ್ಮ ವಿಭಿನ್ನ ಪಾತ್ರಕ್ಕೆ ಸಿಕ್ಕಿದ ಪ್ರಶಂಸೆ ಹಾಗೂ ಸವಾಲಿನ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೆ ಸಿಕ್ಕ ಮನ್ನಣೆ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಭಾವನಾತ್ಮಕವಾಗಿ ತಿಳಿಸಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ‘ದಿ ವ್ವಾನ್’ ಚಿತ್ರದ ವಿಮರ್ಶೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. ಸಿನಿಮಾವನ್ನು ಇಷ್ಟಪಡದ ವಿಮರ್ಶಕರ ಕುರಿತು ಪ್ರತಿಕ್ರಿಯಿಸುತ್ತಾ, “ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ನಮ್ಮ ದೇಶದಲ್ಲಿ ಜನತೆ ತಮ್ಮ ಸಂಸ್ಕೃತಿಗೆ ತಕ್ಕಂತೆ ಬೇರೂರಿರುವ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತಾರೆ. ನಮ್ಮ ‘ದಿ ವ್ವಾನ್’ ಚಿತ್ರವೂ ಕೂಡ ಪ್ರೇಕ್ಷಕರ ಆ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ಮದುವೆಯ ದಿನ ನಿರ್ದೇಶಕ ಕರಣ್ ಜೋಹರ್ ‘ಬೇಶರಮ್ ರಂಗ್’ ಹಾಡಿಗೆ ಮಾಡಿದ ಸೊಗಸಾದ ಸೋಲೋ ಡ್ಯಾನ್ಸ್ ಬಗ್ಗೆ ಕಿಯಾರಾ ಅಡ್ವಾಣಿ ಮಾತನಾಡಿದ್ದಾರೆ. ಕರಣ್ ಡ್ಯಾನ್ಸ್ ಮಾಡುತ್ತಿದ್ದಾಗ, ಇದನ್ನು ನೋಡಿ ನಟ ಶಾಹಿದ್ ಕಪೂರ್ ಅವರಿಗೆ ಸಾಥ್ ನೀಡಲು ವೇದಿಕೆಗೆ ಹೋಗಿದ್ದರಂತೆ. ಆದರೆ, ಕರಣ್ ಜೋಹರ್ ತಕ್ಷಣವೇ ಶಾಹಿದ್ ಅವರನ್ನು ವೇದಿಕೆಯಿಂದ ಹೊರಗೆ ಕಳುಹಿಸಿ, “ನನ್ನ ಡ್ಯಾನ್ಸ್ ಮಧ್ಯೆ ಅವರು ಯಾಕೆ ಬಂದರು ಗೊತ್ತಿಲ್ಲ” ಎಂದು ತಮಾಷೆಯಾಗಿ ನಗುತ್ತಾ ಹೇಳಿರುವುದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ.

Must Read

Skip to toolbar