ಖಲಿಸ್ತಾನಿ ಸಂಘಟನೆಯಿಂದ ಕೇಜ್ರಿವಾಲ್​ಗೆ 133 ಕೋಟಿ ರೂ. ಪಾವತಿ: ಪನ್ನುನ್ ಗಂಭೀರ ಆರೋಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2014 ರಿಂದ 2022ರ ನಡುವೆ ಖಲಿಸ್ತಾನಿ ಸಂಘಟನೆಗಳಿಂದ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಾರ್ಟಿಯು ಸುಮಾರು 16 ಮಿಲಿಯನ್​ ಡಾಲರ್​ (ಅಂದಾಜು 133.54 ಕೋಟಿ ರೂ.) ಪಡೆದಿದೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಗಂಭೀರ ಆರೋಪ ಮಾಡಿದ್ದಾನೆ. ಹೀಗಾಗಿ ಎಎಪಿ ಈಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ.

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಗುರುಪತ್ವಂತ್ ಸಿಂಗ್ ಪನ್ನುನ್, 2014 ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹಣಕ್ಕಾಗಿ ಶಿಕ್ಷೆಗೊಳಗಾದ ಭಯೋತ್ಪಾದಕ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಪ್ರಸ್ತಾವನೆ ಒಂದನ್ನು ಮುಂದಿಟ್ಟರು ಎಂದು ಆರೋಪಿಸಿದ್ದಾನೆ.

ಆರೋಪಿ ಬುಲ್ಲರ್​ 1993ರಲ್ಲಿ ನಡೆದ ದೆಹಲಿ ಬಾಂಬ್​ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದನು. ಈ ಸ್ಫೋಟದಲ್ಲಿ 9 ಮಂದಿ ಸಾವಿಗೀಡಾಗಿ 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಸೋಮವಾರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಈ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ಕೇಜ್ರಿವಾಲ್ ಮತ್ತು ಅವರ ಪಕ್ಷದ ವಿರುದ್ಧ ಪನ್ನುನ್​​ ಆರೋಪ ಇದೇ ಮೊದಲೇನಲ್ಲ. ಕಳೆದ ಜನವರಿಯಲ್ಲಿ ದೆಹಲಿ ಸಿಎಂ ಕೇಜ್ರಿವಾಲ್​ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್, ಯುಎಸ್ ಮತ್ತು ಕೆನಡಾದಲ್ಲಿನ ಖಲಿಸ್ತಾನ್ ಬೆಂಬಲಿಗರಿಂದ 6 ಮಿಲಿಯನ್ ಡಾಲರ್​ ದೇಣಿಗೆ ಪಡೆದು, ಪಂಜಾಬ್‌ನಲ್ಲಿನ ತಮ್ಮ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಪನ್ನುನ್​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!