ನಡು ರಸ್ತೆಯಲ್ಲಿಯೇ ರವಿಕೃಷ್ಣನ್- ಅರ್ಜುನ ನಡುವೆ ಕಾದಾಟ: ಆರಾಟ್ಟುಪುಳ ಉತ್ಸವದಲ್ಲಿ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ತ್ರಿಶೂರ್‌ನಲ್ಲಿ ಹಮ್ಮಿಕೊಳ್ಳಲಾದ ಆರಾಟ್ಟುಪುಳ ಉತ್ಸವದ ಸಂದರ್ಭ ಉತ್ಸವ ಅಲಂಕೃತ ಆನೆಗಳೆರಡು ಸೆಣಸಾಟಕ್ಕಿಳಿದಿದ್ದು, ಈ ಘಟನೆಯಲ್ಲಿ ಮಾವುತರುಗಳ ಸಹಿತ ಹಲವು ಮಂದಿಗೆ ಗಾಯಗಳಾಗಿವೆ.

ಉತ್ಸವದಲ್ಲಿ ಪಾಲ್ಗೊಂಡಿದ್ದ ಗುರುವಾಯೂರಿನ ರವಿಕೃಷ್ಣನ್ ಎಂಬ ಆನೆ ಮೊದಲಿಗೆ ಹಿಂಸಾತ್ಮಕವಾಗಿ ವರ್ತಿಸಿದೆ. ಬಳಿಕ ತನ್ನನ್ನು ಹಿಡಿದುಕೊಂಡಿದ್ದ ಮಾವುತರನ್ನೇ ತಳ್ಳಿ ಹಿಂಬಂದಿಯಲ್ಲಿದ್ದ ಪುತ್ತುಪ್ಪಲ್ಲಿ ಅರ್ಜುನ ಎಂಬ ಆನೆಯ ಮೇಲೆ ಏರಿಹೋಗಿದೆ. ಎರಡೂ ಆನೆಗಳ ನಡುವೆ ಕೆಲಕಾಲ ಘರ್ಷಣೆಯಾಗಿದ್ದು, ಪುತ್ತುಪ್ಪಲ್ಲಿ ಅರ್ಜುನ ಈ ಕಾದಾಟದಿಂದ ಹಿಂದಕ್ಕೆ ಸರಿದಿದೆ. ಆದರೂ ಬಿಡದ ರವಿಕೃಷ್ಣನ್ ಅರ್ಜುನನನನು ಅಟ್ಟಾಡಿಸಿದೆ.

ಈ ವೇಳೆ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಕಾಲ್ತುಳಿತದಿಂದಾಗಿ ಹಲವರು ಗಾಯಗೊಂಡಿದ್ದಾರೆ. ಸುಮಾರು ಒಂದು ತಾಸಿನ ಬಳಿಕ ಆನೆ ಶಾಂತಗೊಂಡಿದ್ದು, ಮತ್ತೆ ದೇವಸ್ಥಾನಕ್ಕೆ ಕರೆತರಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!