13,966 ಕೋಟಿ ರೂ. ಮೊತ್ತದ ಏಳು ಕೃಷಿ ಯೋಜನೆಗಳಿಗೆ ಕೇಂದ್ರ ಸರಕಾರ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇಂದ್ರ ಸಚಿವ ಸಂಪುಟ ಇಂದು 13,966 ಕೋಟಿ ರೂ ಮೊತ್ತದ ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಡಾ. ಎ ವೈಷ್ಣವ್, ಡಿಜಿಟಲ್ ಅಗ್ರಿಕಲ್ಚರ್ ಮಿಷನ್, ಸುಸ್ಥಿರ ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ ಇತ್ಯಾದಿ ಯೋಜನೆಗಳೂ ಒಳಗೊಂಡಿವೆ ಎಂದು ತಿಳಿಸಿದರು.

1. ಆಹಾರ ಮತ್ತು ಪೌಷ್ಟಿಕ ಭದ್ರತೆಗೆ ಬೆಳೆ ವಿಜ್ಞಾನ: 3,979 ಕೋಟಿ ರೂ
ಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವುದು, ಬೆಳೆಯ ಗುಣಮಟ್ಟ ಹೆಚ್ಚಿಸಲು ತಳಿ ಸಂಪನ್ಮೂಲದ ಸದ್ಬಳಕೆ ಮಾಡುವುದು, ಬೇಳೆ ಕಾಳು, ಎಣ್ಣಬೀಜ ಮತ್ತು ವಾಣಿಜ್ಯ ಬೆಳೆಗಳ ತಳಿ ಅಭಿವೃದ್ಧಿ; ಕೀಟಗಳು, ಮೈಕ್ರೋಬ್​ಗಳು, ಪರಾಗ ಕರ್ತರು ಮುಂತಾದವುಗಳ ಮೇಲೆ ಸಂಶೋಧನೆ ನಡೆಸಲಾಗುವುದು.

2. ಕೃಷಿ ಶಿಕ್ಷಣ ಮತ್ತು ನಿರ್ವಹಣೆಗೆ 2,291 ಕೋಟಿ ರೂ
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಡಿಯಲ್ಲಿ ಕೃಷಿ ಶಿಕ್ಷಣ, ಕೃಷಿ ನಿರ್ವಹಣೆ, ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲು ಈ ಯೋಜನೆ ಹಾಕಲಾಗಿದೆ. ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿ ಕೃಷಿ ಶಿಕ್ಷಣವನ್ನು ಮೇಲ್ದರ್ಜೆಗೆ ಏರಿಸುವ ಗುರಿ ಇದೆ. ಇದಕ್ಕಾಗಿ ಎಐ, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್, ರಿಮೋಟ್ ಸೆನ್ಸಿಂಗ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಲಾಗುತ್ತದೆ.

3. ಡಿಜಿಟಲ್ ಅಗ್ರಿಕಲ್ಚರ್ ಮಿಷನ್​ಗೆ 2,817 ಕೋಟಿ ರೂ
ಡಿಜಿಟಲ್ ಕೃಷಿ ಯೋಜನೆಯಲ್ಲಿ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಕೃಷಿಗಾರಿಕೆಗೆ ಹೇಗೆ ಬಳಸಬಹುದು, ಆ ಮೂಲಕ ಕೃಷಿ ಉತ್ಪನ್ನಶೀಲತೆ ಹೇಗೆ ಹೆಚ್ಚಿಸುವುದು ಇತ್ಯಾದಿಗೆ ಇದು ನೆರವಾಗಲಿದೆ. ಕೃಷಿಕರ ನೊಂದಣಿ, ಗ್ರಾಮ ಜಮೀನು ನಕ್ಷೆಗಳ ನೊಂದಣಿ, ಬಿತ್ತನೆಗೊಂಡ ಬೆಳೆಗಳ ನೊಂದಣಿ, ಬರ ಪರಿಸ್ಥಿತಿ ಅವಲೋಕನೆ, ಪ್ರವಾಹ ಪರಿಸ್ಥಿತಿ ಅವಲೋಕನೆ, ಹವಾಮಾನ ವರದಿ, ಅಂತರ್ಜಲ ಸ್ಥಿತಿ, ಬೆಳೆ ಇಳುವರಿ ಇತ್ಯಾದಿ ಅನೇಕ ಸಂಗತಿಗಳಿಗೆ ಹೊಸ ತಂತ್ರಜ್ಞಾನವು ನೆರವಾಗಲಿದೆ.

4. ಜಾನುವಾರು ಆರೋಗ್ಯ ಮತ್ತು ಉತ್ಪನ್ನತೆ: 1,702 ಕೋಟಿ ರೂ
ಜಾನುವಾರುಗಳ ಆರೋಗ್ಯ ಪಾಲನೆ, ಹೈನುಗಾರಿಕೆ ಉತ್ಪಾದನೆ ಹೆಚ್ಚಿಸುವುದು, ಜಾನುವಾರಿನ ತಳಿ ಅಭಿವೃದ್ಧಿ, ಜಾನುವಾರುಗಳಿಗೆ ಅವಶ್ಯಕ ಪೌಷ್ಟಿಕಾಂಶ ಇತ್ಯಾದಿಯನ್ನು ದೃಢಪಡಿಸಲಾಗುವುದು.

5. ತೋಟಗಾರಿಕೆ ಅಭಿವೃದ್ಧಿಗೆ 860 ಕೋಟಿ ರೂ
ತರಕಾರಿ, ಹೂವು, ಹಣಬೆ, ಔಷಧ ಸಸ್ಯ, ಸಾಂಬಾರು ಬೆಳೆ ಇತ್ಯಾದಿ ಬೆಳೆಗಳ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತದೆ.

6. ಕೃಷಿ ವಿಜ್ಞಾನ ಕೇಂದ್ರಕ್ಕೆ 1,202 ಕೋಟಿ ರೂ

7. ನೈಸರ್ಗಿ ಸಂಪನ್ಮೂಲ ನಿರ್ವಹಣೆಗೆ 1,202 ಕೋಟಿ ರೂ

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!