ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜೈಲಿನ ಸೆಲ್‌ನಲ್ಲಿರುವ ದರ್ಶನ್ ಮನವಿಗೆ ಜೈಲಾಧಿಕಾರಿಗಳು ಸ್ಪಂದಿಸಿದ್ದಾರೆ. ಬಾತ್ ರೂಂಗೆ ಹೋಗುವಾಗ ಕಷ್ಟವಾಗುತ್ತಿದ್ದು, ಸರ್ಜಿಕಲ್ ಕಮೋಡ್ ಚೇರ್ ನೀಡುವಂತೆ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು.
ಕಳೆದ ಶನಿವಾರ ಬಳ್ಳಾರಿ ಜೈಲಿಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ನೀಡಿದ್ದರು. ಈ ವೇಳೆ ದರ್ಶನ್ ಅವರಿಗೆ ಕಾಡುತ್ತಿರುವ ಬೆನ್ನು ನೋವಿನ ಬಗ್ಗೆ ಮೆಡಿಕಲ್ ರಿಪೋರ್ಟ್ ಅನ್ನು ಕಾರಾಗೃಹದ DIGಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಜೈಲಿನ ಡಾಕ್ಟರ್ ಬಳಿ ದರ್ಶನ್ ಅವರ ಮೆಡಿಕಲ್ ಚೆಕಪ್ ಮಾಡಲಾಗಿತ್ತು.
ಬಳ್ಳಾರಿ ಜೈಲಿನ ಡಾಕ್ಟರ್‌ಗಳು ದರ್ಶನ್ ಬೆನ್ನು ನೋವಿನ ಮೆಡಿಕಲ್ ರಿಪೋರ್ಟ್ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಬೆನ್ನು ನೋವಿನ ಹಿನ್ನೆಲೆಯಲ್ಲಿ ದರ್ಶನ್ ಗೆ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ.
ಬಳ್ಳಾರಿ ಜೈಲಿಗೆ ಇಂದು ದರ್ಶನ್‌ಗಾಗಿ ಜಿಲ್ಲಾಸ್ಪತ್ರೆಯಿಂದ ಸರ್ಜಿಕಲ್ ಚೇರ್ ಅನ್ನು ತರಲಾಗಿದೆ. ಕಾರಿನಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಸರ್ಜಿಕಲ್ ಚೇರ್ ತಂದು ಜೈಲಾಧಿಕಾರಿಗಳಿಗೆ ನೀಡಿದ್ದಾರೆ. ಜೈಲಿನ ಸಿಬ್ಬಂದಿ ತಪಾಸಣೆ ನಡೆಸಿದ ಬಳಿಕ ಸರ್ಜಿಕಲ್ ಕಮೋಡ್ ಚೇರ್ ಅನ್ನು ಸೆಲ್‌ಗೆ ಶಿಫ್ಟ್ ಮಾಡಲಾಗಿದೆ.