ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಈಗಿನಿಂದಲೇ ಕೌಂಟ್‌ಡೌನ್ ಶುರು ಮಾಡಿದೆ. ಮುಂಬರುವ ಐಪಿಎಲ್ ಶುರುವಾಗೋಕ್ಕಿಂತ ಮುಂಚೆ ಭಾರತ ತಂಡ ಬರೋಬ್ಬರಿ 14 ಏಕದಿನ ಪಂದ್ಯಗಳನ್ನು ಆಡಲಿದೆ. ಬಿಸಿಸಿಐ ಮತ್ತು ಐಸಿಸಿಯ ಪ್ಲಾನ್ ಪ್ರಕಾರ ವಿಶ್ವದ ಪ್ರಮುಖ 4 ದೇಶಗಳ ವಿರುದ್ಧ ಈ ಸರಣಿಗಳು ನಡೆಯಲಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ಗುಡ್ ಬೈ ಹೇಳಿರೋದು ನಿಮಗೊತ್ತೇ ಇದೆ. ಹಾಗಾಗಿ, ಮುಂಬರುವ ಐಪಿಎಲ್ ಆರಂಭಕ್ಕೂ ಮುನ್ನ ನಡೆಯೋ ಈ 14 ಪಂದ್ಯಗಳಲ್ಲಿ ಈ ಇಬ್ಬರು ದೈತ್ಯ ಆಟಗಾರರು ಬ್ಲೂ ಜೆರ್ಸಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರ ಬ್ಯಾಟಿಂಗ್ ನೋಡೋಕೆ ಕಾಯ್ತಿರೋ ಫ್ಯಾನ್ಸ್‌ಗೆ ಇದಕ್ಕಿಂತ ದೊಡ್ಡ ಹಬ್ಬ ಇನ್ನೊಂದಿಲ್ಲ.
2027ರ ವಿಶ್ವಕಪ್ ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಅಲ್ಲಿಗೆ ಹೋಗೋಕ್ಕಿಂತ ಮುಂಚೆ ಯುವ ಆಟಗಾರರಿಗೆ ಅವಕಾಶ ಕೊಟ್ಟು, ಯಾರು ಸೆಟ್ ಆಗ್ತಾರೆ ಎಂದು ನೋಡೋಕೆ ಮ್ಯಾನೇಜ್‌ಮೆಂಟ್‌ಗೆ ಇದು ಸರಿಯಾದ ಟೈಮ್.
ಒಟ್ಟು 14 ಪಂದ್ಯಗಳಲ್ಲಿ 9 ಪಂದ್ಯಗಳು ಇಂಡಿಯಾದಲ್ಲೇ ನಡೆಯಲಿವೆ. ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಝಿಂಬಾಬ್ವೆ ತಂಡಗಳು ಸರಣಿ ಆಡಲು ಇಂಡಿಯಾಗೆ ಬರಲಿವೆ.
ನಮ್ಮ ಗ್ರೌಂಡ್‌ಗಳಲ್ಲಿ ಪಂದ್ಯಗಳು ನಡೆಯೋದ್ರಿಂದ ಹಿಟ್‌ಮ್ಯಾನ್ ಸಿಕ್ಸರ್‌ಗಳು ಮತ್ತು ಕಿಂಗ್ ಕೊಹ್ಲಿ ಬ್ಯಾಟ್‌ನಿಂದ ರನ್ ಹಾಗೂ ಸೆಂಚುರಿಗಳ ಮಳೆ ಗ್ಯಾರಂಟಿ. ಈ ಸರಣಿಗಳು ರೋಹಿತ್ ಮತ್ತು ವಿರಾಟ್ ಅವರ ಫಾರ್ಮ್ ಹಾಗೂ ಫಿಟ್‌ನೆಸ್ ಅನ್ನು ಕಾಯ್ದುಕೊಳ್ಳಲು ನೆರವಾಗಲಿವೆ.



