ಮಾರ್ಚ್‌ ತಿಂಗಳಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ 14 ಶೇ. ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಮಾರ್ಚ್‌ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ 14 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ 12 ಶೇಕಡಾ, ತ್ರಿಚಕ್ರ ವಾಹನಗಳ ಮಾರಾಟದಲ್ಲಿ 69 ಶೇಕಡಾ, ಪ್ರಯಾಣಿಕ ವಾಹನಗಳ ಮಾರಾಟ ದಲ್ಲಿ 14 ಶೇಕಡಾ, ವಾಣಿಜ್ಯ ವಾಹನಗಳ ಮಾರಾಟದಲ್ಲಿ 10 ಶೇಕಡಾ ಹಾಗು ಟ್ರ್ಯಾಕ್ಟರ್‌ಗಳ ಮಾರಾಟವು 4 ಶೇಕಡಾ ಪ್ರಗತಿ ಸಾಧಿಸಿವೆ.

ಈ ವರ್ಷದ ನಂತರದಲ್ಲಿ ಎಲ್‌ ನಿನೋ ಹವಾಮಾನದ ಕಾರಣ ಮಾನ್ಸೂನ್‌ ಕಳಪೆಯಾಗಬಹುದು. ಇದು ಗ್ರಾಮೀಣ ಭಾರತದ ಬೆಳವಣಿಗೆಯ ಸಾಮರ್ಥ್ಯವನ್ನು ಅಡ್ಡಿಪಡಿಸಬಹುದು. ಇದು ಗ್ರಾಮೀಣ ವಾಹನ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು FADA ಹೇಳಿದೆ.

ಇದನ್ನು ಹೊರತುಪಡಿಸಿ ಭಾರತದ ಅತಿದೊಡ್ಡ ಮೋಟಾರ್‌ಬೈಕ್ ತಯಾರಕ ಹೀರೋ ಕಂಪನಿಯ ದೇಶೀಯ ಮಾರಾಟವು 21 ಶೇ. ಬೆಳವಣಿಗೆಯನ್ನು ಕಂಡಿದೆ, TVS ಮೋಟಾರ್ ಕೋಮಾರಾಟದಲ್ಲಿ 22.5 ಶೇ. ಏರಿಕೆಯಾಗಿದೆ. ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ಸೋಮವಾರ ತನ್ನ ಪ್ರಯಾಣಿಕ ವಾಹನ ಮಾರಾಟದಲ್ಲಿ 30 ಶೇ ಜಿಗಿತವನ್ನು ವರದಿ ಮಾಡಿದೆ, ಅಶೋಕ್ ಲೇಲ್ಯಾಂಡ್ ಮಾರ್ಚ್‌ನಲ್ಲಿ 19 ಶೇ. ಜಿಗಿತವನ್ನು ಕಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!