July 14, 2026
Tuesday, July 14, 2026
spot_img

SHOCKING | ಆಟವಾಡುವಾಗ ಕುಸಿದು ಬಿದ್ದು 14 ವರ್ಷದ ಬಾಲಕಿ ಸಾವು, ಹೃದಯಾಘಾತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಟೇಲ್‌ನಲ್ಲಿ ಊಟ ಮುಗಿಸಿ ತನ್ನ ಸ್ನೇಹಿತರ ಜೊತೆ ಆಟವಾಡುವ ವೇಳೆ 14 ವರ್ಷದ ಬಾಲಕಿಯೊಬ್ಬಳು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದಿದೆ.

ಜಾಮ್‌ನಗರ ನಿವಾಸಿ ಆನಂದಿ ಮೋದಿ ಮೃತರು. ಬೇಸಿಗೆ ರಜೆಯನ್ನು ಕಳೆಯಲು ಆನಂದಿ ತನ್ನ ಮಾವನ ಮನೆಗೆ ಬಂದಿದ್ದಳು. ಭಾನುವಾರ ರಾತ್ರಿ ಕುಟುಂಬದ ಎಲ್ಲರೂ ಹೊಟೇಲ್‌ನಲ್ಲಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿದ ಆನಂದಿ ಕಸಿನ್ಸ್‌ ಜೊತೆ ಆವರನದಲ್ಲಿ ಆಟ ಆಡುತ್ತಿದ್ದಳು. ಈ ವೇಳೆ ಆನಂದಿ ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದಿದ್ದಾಳೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ಬಾಲಕಿಗೆ ಹೃದಯಾಘಾತವಾಗಿರಬಹುದು ಎಂದು ಶಂಕಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !