ಆನ್‌ಲೈನ್‌ ಶೋಕಿಗಾಗಿ 140 ಕಿ.ಮೀ. ಸ್ಪೀಡ್‌ನಲ್ಲಿ ಕಾರ್‌ ಡ್ರೈವಿಂಗ್‌: ನಾಲ್ವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್‌ನಲ್ಲಿ ಹೆಚ್ಚು ಲೈಕ್ಸ್‌ ಹಾಗೂ ಕಮೆಂಟ್ಸ್‌ ಪಡೆಯುವ ಹುಚ್ಚಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ.

ಗುಜರಾತ್​ನ ವಸಾದ್​ನ ಹೆದ್ದಾರಿಯಲ್ಲಿ ವೇಗವಾಗಿ ಕಾರು ಚಲಾಯಿಸಿ, ಇನ್​ಸ್ಟಾಗ್ರಾಂನಲ್ಲಿ ಲೈವ್​ ಮಾಡಲು ಹೋಗಿದ್ದ ಸ್ನೇಹಿತರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸುಮಾರು 140 ಕಿ.ಮೀ ವೇಗದಲ್ಲಿ ಕಾರು ಓಡಿಸಿದ್ದಾರೆ. ಕಾರಿನಲ್ಲಿ ಹಾಡು ಕೇಳುತ್ತಾ ಎಂಜಾಯ್​ ಮಾಡುತ್ತಾ ಜೊತೆಗೆ ಎಂಜಾಯ್​ ಮಾಡುವ ದೃಶ್ಯವನ್ನು ಮತ್ತೋರ್ವ ಇನ್​ಸ್ಟಾದಲ್ಲಿ ಲೈವ್​ ಮಾಡಿದ್ದಾರೆ. ಆದರೆ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂಬಂತೆ ವೇಗದ ಕಾರು ಚಾಲನೆಯಿಂದ ಪಲ್ಟಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!