Thursday, August 11, 2022

Latest Posts

ಸೇಡಂನಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ

ದಿಗಂತ ವರದಿ ಕಲಬುರಗಿ: 

ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ನಾಳೆ (ಶನಿವಾರ) ಬೆಳಿಗ್ಗೆವರೆಗೂ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಮುಕ್ರಂಖಾನ ಬಂಧನಕ್ಕೆ ಆಗ್ರಹಿಸಿ ಶ್ರೀ ರಾಮ ಸೇನೆಯ ಕಾಯ೯ಕತ೯ರು ಶುಕ್ರವಾರ ಸೇಡಂ ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಸೇಡಂ ಪ್ರಟ್ಟಣದ ಕೊತ್ತಲ ಬಸವೇಶ್ವರ ದೇವಸ್ಥಾನದಲ್ಲಿ ಸಾವಿರಾರು ಹಿಂದೂ ಕಾಯ೯ಕತ೯ರು ಜಮಾಸಿದ್ದು, ಪ್ರತಿಭಟನೆ, ಮೆರವಣಿಗೆ ,ಸಂಭ್ರಮಾಚರಣೆ ಗಳಿಗೆ ತಡೆ ಹಿಡಿಯುವ ನಿಮಿತ್ತ ಹಾಗೂ ಯಾವುದೇ ಅಹಿತಕರ ಘಟನೆ ಜರುಗಬಾರದೆಂಬ ಹಿನ್ನಲೆಯಲ್ಲಿ 144 ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss