1447 ಮನೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ವಸತಿ ಸಚಿವ ವಿ.ಸೋಮಣ್ಣ

ಹೊಸದಿಗಂತ ವರದಿ, ಕಲಬುರಗಿ
ಬಡವರು ಬಡವರಾಗಿ ಉಳಿಯಬಾರದು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರಾಜ್ಯದ್ಯಂತ ಬಡವರಿಗೆ ನಿವೇಶನ, ಮನೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಸ್‌ ಯೋಜನೆ -ಸರ್ವರಿಗೂ ಸೂರು ಯೋಜನೆಯಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 7 ಕೊಳಚೆ ಪ್ರದೇಶದಲ್ಲಿ 92.48 ಕೋಟಿ ರೂ. ವೆಚ್ಚದಲ್ಲಿ ಜಿ+ ಮಾದರಿಯ 1447 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 1821 ಘೋಷಿತ ಕೊಳಗೇರಿ ಪ್ರದೇಶಗಳಿವೆ. ಇವುಗಳಲ್ಲಿ ಹಲವರಿಗೆ 8628.30 ಗುಂಟೆ ಸ್ಥಳದ ಹಕ್ಕು ಪತ್ರ ನೀಡುವ ಮೂಲಕ ಸೂರು ಕಲ್ಪಿಸುವ ಕೆಲಸ ಮಾಡಲಾಗಿದೆ. ಕಲಬುರಗಿಯಲ್ಲಿ ಸುಮಾರು 126 ಕೊಳಚೆ ಪ್ರದೇಶಗಳಿದ್ದು, 19,516 ಕುಟುಂಬ ವಾಸಿಸುತ್ತಿವೆ.
ಅದರಲ್ಲಿ ಇದೀಗ 7 ಕೊಳಚೆ ಪ್ರದೇಶಗಳ 1947 ನಿವೇಶನ ಗಳ ಹಕ್ಕು ಪತ್ರ ನೀಡಲಾಗುತ್ತಿದ್ದು, ಒಟ್ಟು 3500 ಜನರಿಗೆ ಹಕ್ಕುಪತ್ರ ನೀಡಲಾಗುವುದು. ಇದು 100 ಕೋಟಿ ರೂ. ವೆಚ್ಚದಲ್ಲಿಮನೆಗಳು ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದ ಜನೆವರಿ, ಫೆಬ್ರವರಿಯಲ್ಲಿಮನೆಗಳ ಉದ್ಘಾಟನೆಯಾಗಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕೆಕೆಆರ್‌ಡಿಬಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ ಮಾತನಾಡಿ, ಕಲಬುರಗಿ ದಕ್ಷಿಣ ಮತ ಕ್ಷೇತ್ರದಲ್ಲಿ27 ಕೊಳಗೇರಿಗಳಿವೆ. ಅ
ವುಗಳ ಅಭಿವೃದ್ಧಿಗೆ ಸುಮಾರು ಇನ್ನೂ 2000 ಮನೆ ನೀಡಬೇಕೆಂದು ಸಚಿವರಿಗೆ ಮನವಿ ಮಾಡಿದರು. ಕೊಳೆಗೇರಿ ಅಭಿವೃದ್ಧಿ ನಿಗಮದಿಂದ ನಿರ್ಮಿಸಲಾದ ಮನೆಗಳ ಫಲಾನುಭವಿಗಳಿಂದ ಸ್ಪಲ್ಪಪ್ರಮಾಣದ ಹಣ ತೆಗೆಕೊಳ್ಳಲಾಗುತ್ತದೆ. ಇದರ ಬಗ್ಗೆ ಸಚಿವರು, ಮುಖ್ಯಮಂತ್ರಗಳ ಜತೆ ಮಾತನಾಡಿ, ಇದನ್ನು ಸರಕಾರದಿಂದ ಭರಿಸುವ ಹಾಗೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ತಮ್ಮ ಭಾಷಣದಲ್ಲಿಉತ್ತರಿಸಿದ ಸಚಿವರು, ಸರಕಾರಕ್ಕೆ ಇ ಯೋನನೆ ಬಗ್ಗೆ ತಿಳಿಸುವೆ ಆದರೆ ಕನಿಷ್ಠ 50,000 ರೂ. ಫಲಾನುಭವಿ ಕಟ್ಟಬೇಕು ಇದರಿಂದ ಅವರಿಗೆ ಮನೆ ತಮ್ಮ ದುಡಿಮೆಯಿಂದ ಬಂದಿದೆ ಎಂಬ ಪ್ರೀತಿ ಹುಟ್ಟುತ್ತದೆ ಎಂದು ಹೇಳಿದರು.
ಸಂಸದ ಡಾ.ಉಮೇಶ ಜಾಧವ ಮಾತನಾಡಿದರು. ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ಕೊಳಗೇರಿ ಅಭಿವೃದ್ಧಿ ಮಂಡಳಿಯ ಸದಸ್ಯ ನಾಗರಾಜ ಎಂ. ಬಿರಾದರ, ಸ್ಲಂ ಬೋರ್ಡ್‌ ಆಯುಕ್ತ ಬಿ.ವೆಂಕಟೇಶ, ತಾಂತ್ರಿಕ ನಿರ್ದೇಶಕ ಬಿ.ಎಂ.ಕಪನಿಗೌಡ, ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜ, ಮಹಾನಗರ ಪಾಲಿಕೆ ಅಯುಕ್ತ ಭುವನೇಶ ಪಾಟೀಲ ದೇವಿದಾಸ ಸೇರಿ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!