ಸರ್ಕಾರಿ ನೌಕರಿಗೆ ವರ್ಕ್ ಫ್ರಮ್ ಹೋಮ್: ಹೊರಬಿತ್ತು ಖಡಕ್ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ಎರಡು ವಾರಗಳ ಕಾಲ ವರ್ಕ್ ಫ್ರಮ್ ಹೋಮ್ ನಡೆಸುವಂತೆ ತನ್ನ ಉದ್ಯೋಗಿಗಳಿಗೆ ಲಂಕೆಯ ಆಡಳಿತ ಖಡಕ್ ಸೂಚನೆ ನೀಡಿದೆ.
ಕಳೆದ ಏಳು ದಶಕಗಳಲ್ಲೇ ಅತ್ಯಂತ ಘೋರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದ್ವೀಪ ರಾಷ್ಟ್ರದಲ್ಲಿ ಈಗ ಇಂಧನ ಕೊರತೆ ದುಃಸ್ವಪ್ನವಾಗಿ ಕಾಡುತ್ತಿದ್ದು, ಇಂಧನ ಉಳಿತಾಯದ ಒಂದು ಭಾಗವಾಗಿ ಸರ್ಕಾರ ಈಗ ಈ ನಿರ್ಧಾರಕ್ಕೆ ಬಂದಿದೆ.
1948ರಲ್ಲಿ ಸ್ವತಂತ್ರಗೊಂಡ ಬಳಿಕ ಇದೇ ಮೊದಲಬಾರಿಗೆ ಲಂಕೆ ಇಂತಹಾ ಸ್ಥಿತಿ ಎದುರಿಸುತ್ತಿದೆ. ಆಡಳಿತ ವೈಫಲ್ಯ ಹಾಗೂ ಕೋವಿಡ್‌ನಿಂದಾಗಿ 2.2 ಕೋಟಿ ಜನಸಂಖ್ಯೆಯಿರುವ ಈ ರಾಷ್ಟ್ರ ಈಗ ಕಂಗಾಲಾಗಿದೆ.
ಇಂಧನ ಆಮದು ಮಾಡಿಕೊಳ್ಳಲು ಆರ್ಥಿಕ ಕೊರತೆ ಎದುರಿಸುತ್ತಿರುವ ಲಂಕೆಯಲ್ಲಿ ದಾಸ್ತಾನಿರುವ ಪೆಟ್ರೋಲ್, ಡೀಸೆಲ್ ಸಂಗ್ರಹ ಕೆಲವೇ ದಿನಗಳಲ್ಲಿ ಖಾಲಿಯಾಗಲಿದೆ. ಇಂಧನ ಪೂರೈಕೆಯ ಮೇಲಿನ ತೀವ್ರ ಮಿತಿ, ಇದರಿಂದಾಗಿ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ ಬಳಸುವಲ್ಲಿನ ತೊಂದರೆಗಳನ್ನು ಗಂಭೀರವಾಗಿ ಲೆಕ್ಕಾಚಾರ ಹಾಕಿರುವ ಸರ್ಕಾರ, ಸೋಮವಾರದಿಂದ ಕನಿಷ್ಠ ಸಿಬ್ಬಂದಿಗೆ ಮಾತ್ರ ಕರ್ತವ್ಯಕ್ಕೆ  ವರದಿ ಮಾಡಲು ಸೂಚಿಸಿದೆ. ಉಳಿದಂತೆ ವರ್ಕ್ ಫ್ರಂ ಹೋಮ್ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!