Friday, June 2, 2023

Latest Posts

ಇಂದಿನಿಂದ 15 ದಿನ ಶಾಲೆ-ಕಾಲೇಜು ಬಂದ್: ಮತ್ತೆ ಆನ್‌ಲೈನ್ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಿಕ್ರಾನ್ ಸೋಂಕು ಹೆಚ್ಚಳ ಹಿನ್ನೆಲೆ ಬೆಂಗಳೂರಿನಲ್ಲಿ ಇಂದಿನಿಂದ 15 ದಿನ ಶಾಲಾ ಕಾಲೇಜುಗಳು ಬಂದ್ ಆಗಲಿವೆ. ಜೊತೆಗೆ ಇಂದಿನಿಂದ ನೈಟ್‌ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಕೂಡ ಆರಂಭವಾಗಲಿವೆ.
ಮಾಲ್, ಮೆಟ್ರೋ, ಬಸ್, ಥಿಯೇಟರ್‌ಗಳಲ್ಲಿ ಶೇ.50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.

ಎಲ್‌ಕೆಜಿ ಮತ್ತು ಯುಕೆಜಿ, ಒಂದರಿಂದ 9 ನೇ ತರಗತಿವರೆಗೆ ಎಲ್ಲ ಶಾಲೆಗಳು ಬಂದ್ ಆಗಲಿವೆ. ಪದವಿ ಕಾಲೇಜುಗಳು ಬಂದ್ ಆಗಲಿದ್ದು, ಆನ್‌ಲೈನ್ ಕ್ಲಾಸ್‌ಗಳು ನಡೆಯಲಿವೆ. ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ,ದ್ವಿತೀಯ ಪಿಯುಸಿ ತರಗತಿಗಳು ನಡೆಯಲಿವೆ.

ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಬರೋಬ್ಬರಿ ಎರಡು ವರ್ಷ ತರಗತಿಗಳು ಬಂದ್ ಆಗಿದ್ದವು. ಆನ್‌ಲೈನ್ ತರಗತಿ ಮಾತ್ರ ಇತ್ತು. ತೀರ ಇತ್ತೀಚೆಗೆ, ನಾಲ್ಕು ತಿಂಗಳ ಹಿಂದಿನಿಂದ ಭೌತಿಕ ತರಗತಿಗಳು ಆರಂಭವಾಗಿದ್ದು, ಈಗಿನ್ನೂ ಮಕ್ಕಳು ಶಾಲಾ ವಾತಾವರಣಕ್ಕೆ ಒಗ್ಗುತ್ತಿದ್ದರು.

ಇದೀಗ ಕೊರೋನಾ ಹಾವಳಿ ಮತ್ತೆ ಹೆಚ್ಚಾಗಿದ್ದು, ಬ್ಯಾಕ್ ಟು ಆನ್‌ಲೈನ್ ಕ್ಲಾಸ್ ಎನ್ನುವಂತಾಗಿದೆ. ಮಕ್ಕಳು ಮನೆಯಲ್ಲೇ ಇದ್ದು ಕಲಿಕೆ ಮುಂದುವರಿಸಬೇಕಿದೆ. ಪರಿಸ್ಥಿತಿ ಅನ್ವಯ ಶಾಲೆಗಳ ರೀ ಓಪನ್ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!