ಎಬಿಜಿಪಿಯಿಂದ 15 ದಿನಗಳ ‘ಗ್ರಾಹಕ್ ಜಾಗರಣ ಪಖ್ವಾಡ’ ಕಾರ್ಯಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರಾಹಕ ಶೋಷಣೆಗೆ ಒಳಗಾಗದ ಕ್ಷೇತ್ರವಿಲ್ಲ. ಜಗತ್ತಿನಾದ್ಯಂತ ಪ್ರಯತ್ನಿಸಿದ ಬಂಡವಾಳಶಾಹಿ, ಕಮ್ಯುನಿಸಂ, ಸಮಾಜವಾದದಂತಹ ಎಲ್ಲಾ ಆರ್ಥಿಕ ವ್ಯವಸ್ಥೆಗಳು ಗ್ರಾಹಕರಿಗೆ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿವೆ. ಆದ್ದರಿಂದ ಗ್ರಾಹಕರನ್ನು ಸಂಘಟಿಸಲು ಮತ್ತು ಹಿಂಸೆಗೆ ಒಳಗಾಗದೆ ಅನ್ಯಾಯವನ್ನು ವಿರೋಧಿಸಲು ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುವುದು ಅವಶ್ಯಕ.  ದೇಶದಲ್ಲಿ ABGP (ಅಖಿಲ ಭಾರತೀಯ ಗ್ರಾಹಕ ಪಂಚಾಯತ್ಈ)  ಸವಾಲಿನ ಪಾತ್ರವನ್ನು ವಹಿಸಿಕೊಂಡಿದೆ.  “ಶೋಷಣ ಮುಕ್ತ ಭಾರತ” ಮಾಡುವುದೇ ABGP ಯ ಉದ್ದೇಶವಾಗಿದೆ.

ಪಾಶ್ಚಾತ್ಯ ಗ್ರಾಹಕ ವಾದವು ‘ಅರ್ಥ’ ಮತ್ತು ‘ಕಾಮ’ವನ್ನು ಮಾತ್ರ ಆಧರಿಸಿದೆ ಆದರೆ ಭಾರತೀಯ ತತ್ತ್ವಶಾಸ್ತ್ರವು ಧರ್ಮ ಮತ್ತು ಮೋಕ್ಷ ಎಂಬ ಎರಡು ಸ್ತಂಭಗಳನ್ನು ಆಧರಿಸಿದೆ. ಅರ್ಥ (ಹಣ)ಮತ್ತು ಕಾಮ(ಆಸೆ) ಉನ್ಮತ್ತವಾಗಿದೆ. ಇದರ ಪರಿಣಮವೇ ಅರ್ಥಿಕ ವ್ಯವಸ್ಥೆಯು ಡೋಲಾಯಮಾನ ಸ್ಥಿತಿಗೆ ತಲುಪಲು ಕಾರಣ.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಏಕಮೇವ ರಾಷ್ಟೀಯ ಸಂಘಟನೆಯಾಗಿದ್ದು, ನಮ್ಮ ದೇಶದಲ್ಲಿ ಗ್ರಾಹಕರ ಹಿತ ರಕ್ಷಣೆಯ ಘನ ಉದ್ದೇಶದಿಂದ ಸ್ಥಾಪಿತವಾದ ಒಂದು ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಪರಿಚಿತವಾಗಿದೆ.

ಎಬಿಜಿಪಿಯ ಕರ್ನಾಟಕ ಪ್ರಾಂತದಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಬಗ್ಗೆ ಗ್ರಾಹಕರಿಗೆ ಶಿಕ್ಷಣ ನೀಡಲು ಅನೇಕ ಕಾರ್ಯಕ್ರಮಗಳನ್ನು ಆಆಯೋಜಿಸುತ್ತಿದೆ. ಗ್ರಾಹಕ ಪಂಚಾಯತ್ ನ್ನು ಜನಸಾಮಾನ್ಯರಿಗೆ ಕೊಂಡೊಯ್ಯುವುದು ಮತ್ತು ಸಾಮೂಹಿಕ ಸಂಘಟನೆಯನ್ನು ರಚಿಸುವುದು ಸಂಸ್ಥೆಯ  ಗುರಿಯಾಗಿದೆ.

ನುರಿತ ಗ್ರಾಹಕರ ಸಂಘಟಿತ ಪಡೆಯನ್ನು ರಚಿಸಬೇಕಾಗಿದ್ದು, ಹದಿನೈದು ದಿನಗಳ ಕಾರ್ಯಕ್ರಮದಲ್ಲಿ ಕೌಶಲ್ಯ ನಿರ್ಮಾಣ ಕಾರ್ಯ  ಗುರಿಯಾಗಿದೆ. ಗುಣಮಟ್ಟವನ್ನು ಸುಧಾರಿಸುವ ಮೂಲಕ ಕಾರ್ಮಿಕರನ್ನು, ಗ್ರಾಹಕರನ್ನು ಸಮರ್ಥರನ್ನಾಗಿ ಮಾಡಬೇಕು. ಗ್ರಾಹಕರ ಆಂದೋಲನಕ್ಕೆ ಅಗತ್ಯವಾದ ಶಕ್ತಿಯನ್ನು ನಿರ್ಮಿಸಲು ಅಭಿಯಾನದ ರೂಪದಲ್ಲಿ ನಮಗೆ ವರ್ಷದಲ್ಲಿ ಈ ಅವಕಾಶ ಸಿಕ್ಕಿದೆ. ಸಮಸ್ಯೆಗಳನ್ನು ಬಗೆಹರಿಸುವಲ್ಲಿ “ಸಂವಾದ್ ಸಮನ್ವಯತಾ ಗ್ರಾಹಕ ಕಲ್ಯಾಣ್” ಎಂಬ ಮಂತ್ರವನ್ನು ಸಾಧಿಸಬೇಕಾಗಿದೆ. ಹದಿನೈದು ದಿನಗಳ ಗ್ರಾಹಕ್ ಜಾಗರಣ ಪಖ್ವಾಡದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಹಕರಲ್ಲಿ ಅರಿವನ್ನು ಮೂಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!