ಚೀನಾದಲ್ಲಿ ರಣಭೀಕರ ಮಳೆ ಅಬ್ಬರಕ್ಕೆ 15 ಜನರು ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದಕ್ಷಿಣ ಚೀನಾದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚೀನಾದ ಪೂರ್ವ ಕರಾವಳಿಯ ಸಮೀಪದಲ್ಲಿರುವ ಫುಜಿಯಾನ್ ಪ್ರಾಂತ್ಯದಲ್ಲಿ ಭೂಕುಸಿತದಿಂದ ಎರಡು ಕಟ್ಟಡ ಕುಸಿದು ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ನೈಋತ್ಯ ಚೀನಾದಲ್ಲಿ ಸುಮಾರು 1,200 ಕಿಲೋಮೀಟರ್ ದೂರದಲ್ಲಿರುವ ಯುನ್ನಾನ್ ಪ್ರಾಂತ್ಯದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಕಾಣೆಯಾಗಿದ್ದಾರೆ. ಗುವಾಂಗ್‌ಕ್ಸಿ ಪ್ರದೇಶದ ಕ್ಸಿನ್‌ಚೆಂಗ್ ದೇಶದಲ್ಲಿ ಶುಕ್ರವಾರ ಮೂವರು ಮಕ್ಕಳು ಪ್ರವಾಹಕ್ಕೆ ಸಿಲುಕಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿ ಒದು ಮಗು ಬದುಕುಳಿಯಿತು ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ವಿಯೆಟ್ನಾಂನ ಗಡಿಯಿಂದ ಉತ್ತರಕ್ಕೆ 130 ಕಿಲೋಮೀಟರ್ ದೂರದಲ್ಲಿರುವ ಯುನ್ನಾನ್‌ನ ಕ್ಯುಬೈ ಕೌಂಟಿಯಲ್ಲಿ ರಸ್ತೆಗಳು, ಸೇತುವೆಗಳು ಮತ್ತು ದೂರಸಂಪರ್ಕ ಮತ್ತು ವಿದ್ಯುತ್ ಸೌಲಭ್ಯಗಳನ್ನು ಹಾನಿಗೊಳಿಸಿದೆ ಎಂದು ವರದಿಯಾಗಿದೆ.
ಫುಜಿಯಾನ್‌ನಲ್ಲಿ, ಶುಕ್ರವಾರ ಕುಸಿದ ಕಾರ್ಖಾನೆಯ ಕಟ್ಟಡದಲ್ಲಿ ಐದು ಮೃತಪಟ್ಟಿದ್ದು ಕುಸಿದ ವಸತಿ ಕಟ್ಟಡಗಳ ಅವಶೇಷಗಳಡಿ ಇತರ ಮೂವರು ಮೃತದೇಹಗಳು ಪತ್ತೆಯಾಗಿದೆ. ಕರಾವಳಿ ನಗರವಾದ ಕ್ಸಿಯಾಮೆನ್‌ನಿಂದ 210 ಕಿಲೋಮೀಟರ್ ಒಳನಾಡಿನಲ್ಲಿರುವ ವುಪಿಂಗ್ ಕೌಂಟಿಯಲ್ಲಿ ಗುರುವಾರ ಸಂಜೆಯಯಿಂದ ಭಾರೀ ಮಳೆ ಸುರಿಯುತ್ತಿದೆ. ನಗರದ ಪ್ರಮುಖ ರಸ್ತೆಗಳು ಕೆಸರಿನ ನೀರಿನಿಂದ ತುಂಬಿದ್ದು, ಕೆಲವು ರಸ್ತೆಗಳು ಭಾಗಶಃ ಕೊಚ್ಚಿಹೋಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!