ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ವಯನಾಡಿನಲ್ಲಿ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಮೃತಪಟ್ಟ ಪ್ರಕರಣ ಇದೀಗ ರಾಜಕೀಯದ ತಿರುವು ಪಡೆದಿದ್ದು, ಚಾಲಕನ ಕುಟುಂಬಕ್ಕೆ ಕರ್ನಾಟಕದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆದೇಶದ ಮೇರೆಗೆ ರಾಜ್ಯದ ಕೈ ನಾಯಕರು 15 ಲಕ್ಷ ರೂಪಾಯಿ ನೀಡಿದ್ದಾರೆ. ಕೇರಳದಲ್ಲಿ ಆನೆ ದಾಳಿಯಾಗಿ ಟ್ರಾಕ್ಟರ್ ಚಾಲಕ ಮೃತಪಟ್ಟಿದ್ದಕ್ಕೆ ಸಂತಾಪ ಸೂಚಿಸುತ್ತೇವೆ. ಆದರೆ ಕರ್ನಾಟಕದಿಂದ ಪರಿಹಾರ ನೀಡುತ್ತಿರುವುದು ಯಾಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಫೆ.10ರಂದು ಘಟನೆ ನಡೆದಿದ್ದು, ರಾಹುಲ್ ಗಾಂಧಿ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ 15 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದ್ದರು ಎನ್ನಲಾಗಿದೆ. ಈ ಪರಿಹಾರ ಹಣವನ್ನು ಕರ್ನಾಟಕ ಸರ್ಕಾರ ನೀಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ರಾಹುಲ್ ಗಾಂಧಿ ಮೆಚ್ಚಿಸಲು ನಮ್ಮ ರಾಜ್ಯದ ಜನರ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ.
ರಾಜ್ಯಕ್ಕೆ ಸಂಬಂಧವೇ ಇಲ್ಲದ ವಿಚಾರವೊಂದಕ್ಕೆ 15 ಲಕ್ಷ ರೂಪಾಯಿ ವ್ಯಯಿಸುವ ಈ ರಾಜ್ಯ ಸರ್ಕಾರ “ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ” ಎಂಬ ಗಾದೆಗೆ ಅನ್ವರ್ಥನಾಮವಾಗಿದೆ
“ನನ್ನ ತೆರಿಗೆ ನನ್ನ ಹಕ್ಕು” “ನಮ್ಮ ದುಡ್ಡು ಇನ್ಯಾರಿಗೋ ಯಾಕೆ ಕೊಡಬೇಕು?”ಎಂದು ಎದೆ ತಟ್ಟಿಕೊಂಡು ಸುಳ್ಳೇ ನಾಟಕ ಮಾಡುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತವರ… pic.twitter.com/1k8lHcCiq6
— C T Ravi 🇮🇳 ಸಿ ಟಿ ರವಿ (@CTRavi_BJP) February 20, 2024