ಕಾರ್ಡಿಯಾಕ್ ಅರೆಸ್ಟ್‌ನಿಂದ ಕಿರುತೆರೆ ನಟ ರಿತುರಾಜ್ ಸಿಂಗ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದಿ ಸೀರಿಯಲ್‌ಗಳ ಜನಪ್ರಿಯ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.

ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ರಿತುರಾಜ್ ಆರೋಗ್ಯ ತೀವ್ರ ಹದಗೆಟ್ಟಿತ್ತು. 15 ದಿನಗಳಿಂದ ಆಸ್ಪತ್ರೆಯಲ್ಲಿ ರಿತುರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಡಿಸ್ಚಾರ್ಜ್ ನಂತರ ಮನೆಗೆ ಆಗಮಿಸಿದ್ದರು. ಆದರೆ ಕೆಲ ದಿನಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎಂದು ರಿತುರಾಜ್ ಸ್ನೇಹಿತ ಅಮಿತ್ ಬೆಹ್ಲ್ ಹೇಳಿದ್ದಾರೆ.

ರಿತುರಾಜ್ ನಿಧನಕ್ಕೆ ಹಿಂದಿ ಕಿರುತೆರೆ ನಟರು ಸಂತಾಪ ಸೂಚಿಸಿದ್ದಾರೆ. ಬನೇಗಿ ಅಪ್ನಿ ಬಾತ್ ಸೀರಿಯಲ್‌ನಿಂದ ಜರ್ನಿ ಆರಂಭಿಸಿದ ರಿತುರಾಜ್, ಜ್ಯೋ, ಹಿಟ್ಲರ್ ದೀದಿ, ಶಪತ್, ಯೇ ರಿಷ್ತಾ ಕ್ಯಾ ಕೆಹ್ಲಾತಾ ಹೇ, ಆಹಟ್, ಅದಾಲಟ್ ಹಾಗೂ ದಿಯಾ ಔರ್ ಬಾತಿ ಹಮ್ ಧಾರಾವಾಹಿಗಳಲ್ಲಿ ನಟಿಸಿದ್ದರು.

ಬದ್ರಿನಾಥ್ ಕಿ ದುಲ್ಹನಿಯಾ, ವಶ್, ತುನಿವು, ಯಾರಿಯಾ, ಸತ್ಯಮೇವ್ ಜಯತೆ ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!