SHOCKING | ಯೂಟ್ಯೂಬ್ ನೋಡಿ ಮಗುವಿಗೆ ಜನ್ಮ ನೀಡಿ, ನಂತರ ಕತ್ತು ಹಿಸುಕಿ ಕೊಂದ 15ರ ಬಾಲಕಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ನಾಗ್ಪುರದಲ್ಲಿ 15 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಮಗುವನ್ನು ಕತ್ತು ಹಿಸುಕಿ ಕೊಂದು, ಮೃತದೇಹವನ್ನು ತನ್ನ ಮನೆಯಲ್ಲಿಯೇ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದಾಳೆ.

ಯೂಟ್ಯೂಬ್ ವಿಡಿಯೋ ಸಹಾಯದಿಂದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ, ಇದಾದ ನಂತರ ಮಗುವನ್ನು ಕೊಂದಿದ್ದಾಳೆ. ಸಾಮಾಜಿಕ ಜಾಲತಾಣವನ್ನು ಸಕ್ರಿಯವಾಗಿ ನಡೆಸುತ್ತಿದ್ದ ಬಾಲಕಿ ಅಲ್ಲಿಯೇ ರಮೇಶ್ ಠಾಕೂರ್ ಎಂಬಾತನ ಪರಿಚಯ ಮಾಡಿಕೊಂಡಿದ್ದಳು.

ಸಂಭಾಷಣೆ ಪ್ರೀತಿಗೆ ತಿರುಗಿದ್ದು, ಪದೇ ಪದೆ ಭೇಟಿಯಾಗುತ್ತಿದ್ದರು. ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದು, ಆಕೆ ಗರ್ಭಿಣಿಯಾಗಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೆರಿಗೆ ನೋವು ಕಾಣಿಸಿದ್ದು, ಫೋನ್ ಬಳಸಿ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿದ್ದಾಳೆ. ನಂತರ ಮಗುವಿನ ಕತ್ತು ಹಿಸುಕಿ ಬಾಕ್ಸ್‌ನಲ್ಲಿ ಶವವನ್ನು ಬಚ್ಚಿಟ್ಟಿದ್ದಳು.

ಮನೆಗೆ ತಾಯಿ ಬಂದಮೇಲೆ ಹೆದರಿ ಎಲ್ಲ ವಿಷಯವನ್ನು ಹೇಳಿದ್ದು, ಆಕೆಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!