ದೇಶದಲ್ಲಿ 150 ಕೋಟಿ ಕೊರೋನಾ ಡೋಸ್ ವಿತರಣೆ ಪೂರ್ಣ: ಪ್ರಧಾನಿ ಮೋದಿ ​

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಇಲ್ಲಿಯವರೆಗೆ 150 ಕೋಟಿ ಕೊರೋನಾ ಡೋಸ್​ ನೀಡಲಾಗಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೋಲ್ಕತ್ತಾದಲ್ಲಿನ ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​​ ಸಂಸ್ಥೆಯ ಎರಡನೇ ಕ್ಯಾಂಪಸ್​​ ಅನ್ನು ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ, ವಿಜ್ಞಾನಿಗಳು, ಲಸಿಕೆ ತಯಾರಕರು ಮತ್ತು ಆರೋಗ್ಯ ಕಾರ್ಯಕರ್ತರ ಪ್ರಯತ್ನದಿಂದಾಗಿ ದೇಶವು ಶೂನ್ಯದಿಂದ ಪ್ರಾರಂಭವಾದ ಈ ಪ್ರಯಾಣ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ದೇಶದಲ್ಲಿ ಈಗ 15-18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್​ ನೀಡಲುಆರಂಭವಾಗಿದ್ದು, ಕೇವಲ 5 ದಿನಗಳಲ್ಲಿ 1.5 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.
ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​​ ಸಂಸ್ಥೆಯ ಎರಡನೇ ಕ್ಯಾಂಪಸ್​​ ಅನ್ನು ಉದ್ಘಾಟನೆ ವೇಳೆ ಸಿಎಂ ಮಮತಾ ಬ್ಯಾನರ್ಜಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!