ದೇಶಾದ್ಯಂತ 1,500 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಿದೆ ಅದಾನಿ ಟೋಟಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ನಗರಗಳಿಗೆ ಗ್ಯಾಸ್ ವಿತರಣೆಯಲ್ಲಿ ತೊಡಗಿಕೊಂಡಿರುವ ‘ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್’ ಈಗ ವಿದ್ಯುತ್ ಚಾಲಿತ ವಾಹನಗಳ ಮೂಲಸೌಕರ್ಯ ವಿಭಾಗಕ್ಕೆ ಕಾಲಿಟ್ಟಿದೆ.

ಅಹಮದಾಬಾದಿನ ತನ್ನ ಮಣಿನಗರ ಸಿ ಎನ್ ಜಿ ಸ್ಟೇಶನ್ ನಲ್ಲಿ ವಿದ್ಯುತ್ ಚಾಲಿತ ವಾಹನಗಳ ಮರುಪೂರಣಕ್ಕೆ ಬೇಕಾಗುವ ಕೇಂದ್ರ ಸ್ಥಾಪಿಸುವ ಮೂಲಕ ಅದಾನಿ ಸಮೂಹವು ಈ ವಿಭಾಗಕ್ಕೆ ಹೆಜ್ಜೆ ಇಟ್ಟಿದೆ.

ದೇಶಾದ್ಯಂತ ಇದೇ ರೀತಿ 1,500 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ಸಿದ್ಧವಿದೆ. ಇದನ್ನು 1,500ರ ಆಚೆಗೂ ವಿಸ್ತರಿಸುವುದಕ್ಕೆ ಕಂಪನಿ ಒಲವು ಹೊಂದಿದೆ. ಬೇಡಿಕೆ ಹೇಗೆ ಬರುತ್ತದೆ ಎಂಬ ಆಧಾರದಲ್ಲಿ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಅದಾನಿ ಸಮೂಹ ಶ್ರಮಿಸಲಿದೆ ಎಂದು ಅದಾನಿ ಟೋಟಲ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!