ಉಕ್ರೇನ್‌ ವಿಭಜನೆಗೆ ರಷ್ಯಾ ಯೋಜನೆ? ಉಕ್ರೇನ್‌ ಗುಪ್ತಚರ ಇಲಾಖೆಯ ಆತಂಕವೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಕ್ರೇನ್ ದೇಶವನ್ನು ವಿಭಜಿಸಿ ಎರಡು ಪ್ರತ್ಯೇಕ ದೇಶಗಳನ್ನು ರಚಿಸಲು ರಷ್ಯಾ ಯೋಜಿಸಿದೆ ಎಂದು ಉಕ್ರೇನ್ ಅತಂಕ ವ್ಯಕ್ತಪಡಿಸಿದೆ. ಈ ಹಿಂದೆ ಕೊರಿಯಾ ಯುದ್ಧಾನಂತರದ ಆ ದೇಶವನ್ನು ವಿಭಜಿಸಿ ಉತ್ತರ ಮತ್ತು ದಕ್ಷಿಣ ಕೊರಿಯಾ ಎಂಬ ಎರಡು ಪ್ರತ್ಯೇಕ ದೇಶಗಳನ್ನು ರೂಪಿಸಿದಂತೆ ಉಕ್ರೇನ್ ದೇಶವನ್ನೂ ಎರಡು ಭಾಗಗಳಾಗಿ ವಿಭಜಿಸಲು ವ್ಲಾಡಿಮಿರ್ ಪುಟಿನ್ ಪ್ರಯತ್ನಿಸುತ್ತಿದ್ದಾರೆ ಎಂದು ಉಕ್ರೇನ್‌ ನ ಮಿಲಿಟರಿ ಗುಪ್ತಚರ ಮುಖ್ಯಸ್ಥರ ಕಿರಿಲೊ ಬುಡನೊವ್ ಹೇಳಿದ್ದಾರೆ.
ಉಕ್ರೇನ್‌ ನಲ್ಲಿ ನೀರೀಕ್ಷಿತ ಗೆಲುವು ದಕ್ಕದ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿಯ ಸರ್ಕಾರವನ್ನು ಉರುಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುಟಿನ್‌ ಉಕ್ರೇನ್‌ ಕುರಿತಾದ ಯುದ್ಧನೀತಿಯ ಬಗ್ಗೆ ಮರು ಚಿಂತಿಸಿದ್ದು, ಉಕ್ರೇನ್‌ ಅನ್ನು ಎರಡು ಭಾಗಗಳಾಗಿಸುವ ಯೋಜನೆಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಕ್ರೇನ್​ನಲ್ಲಿ ರಷ್ಯಾ ವಶಪಡಿಸಿಕೊಂಡಿರುವ ಭೂ ಭಾಗಗಳನ್ನು ಒಗ್ಗೂಡಿಸಿ ಹೊಸ ದೇಶವನ್ನು ಅಸ್ತಿತ್ವಕ್ಕೆ ತರುವ ಕುರಿತಾದ ಪುಟಿನ್‌ ಚಿಂತನೆಗಳ ಕುರಿತಾಗಿ ನಮಗೆ ಸಾಕಷ್ಟು ಪುರಾವೆಗಳು ಸಿಕ್ಕಿವೆ ಎಂದು ಕಿರಿಲೊ ಹೇಳಿದ್ದಾರೆ. ಪುಟಿನ್‌ ಉಕ್ರೇನ್‌ ನಲ್ಲಿ ಕೈಗೊಂಬೆ ಸರ್ಕಾರವನ್ನು ರಚಿಸುವ ಉದ್ದೇಶ ಹೊಂದಿದ್ದರು. ಆದರೆ ಉಕ್ರೇನ್‌ ರಾಜಧಾನಿ ಕೀವ್‌ ವಶಕ್ಕೆ ಪಡೆಯುವಲ್ಲಿನ ವಿಫಲತೆಯ ನಂತರ ಅವರು ದೇಶವಿಭಜನೆಯತ್ತ ಚಿಂತನೆ ನಡೆಸುತ್ತಿದ್ದಾರೆ. ಉಕ್ರೇನಿಯನ್ ಕರೆನ್ಸಿಯಾದ ಹ್ರಿವ್ನಿಯಾವನ್ನು ಬಳಸದಂತೆ ಜನರ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಉಕ್ರೇನಿಯನ್ನರು ಗೆರಿಲ್ಲಾ ಯುದ್ಧತಂತ್ರದ ಮೂಲಕ ರಷ್ಯಾದ ಎಲ್ಲಾ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಿದ್ದಾರೆ ಎಂದು ಎಂದು ಕಿರಿನೋವ್‌ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!