ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 17 ಮೀನುಗಾರರನ್ನು ಬಂಧಿಸಿದೆ ಮತ್ತು ರಾಮೇಶ್ವರಂ ಕರಾವಳಿಯಲ್ಲಿ ಇಂದು ಬೆಳಿಗ್ಗೆ ಎರಡು ದೋಣಿಗಳನ್ನು ವಶಪಡಿಸಿಕೊಂಡಿದೆ.
ಬಂಧಿತ ಮೀನುಗಾರರನ್ನು ಮಾರ್ಕ್‌ಮಿಲನ್ (37), ಮಿಲ್ಟನ್ (49), ರೊನಾಲ್ಡ್ (48), ಸೇಸುರಾಜ (45), ಜೀವನ್ ಫ್ರಿಶರ್ (22), ಸುರೇಶ್ (45), ಅರುಲ್ ದಿನಕರನ್ (24), ದುರೈ (39). ತಂಗಚಿಮಡಂನ ಮರಿಯಾ ಸೇಥಿನ್ (26), ಅರ್ದಿಯಾ ನಿಚೋ (26), ಜೆಬಾಸ್ಟಿಯನ್ (38), ರಾಜೀವ್ (36), ವಿವೇಕ್ (36), ಇನ್ನಾಚಿ (36), ಸ್ಯಾಮ್ಯುಯೆಲ್ (33), ಬ್ರಿಚನ್ (31), ಮತ್ತು ಭಾಸ್ಕರನ್ ( 30) ಎಂದು ಗುರುತಿಸಲಾಗಿದೆ.
ವಶಪಡಿಸಿಕೊಂಡ ಎರಡು ದೋಣಿಗಳ ಮೀನುಗಾರರಾದ ತಂಗಚಿಮಾಡಂ ವ್ಯಾದರಾಜ್ ಮತ್ತು ತಂಗಚಿಮಾಡಂ ಸೆಲ್ವಂ ಅವರಿಗೆ ಸೇರಿದವು ಎನ್ನಲಾಗಿದೆ.
ರಾಮೇಶ್ವರಂ ಮೀನುಗಾರರ ಸಂಘದ ಪ್ರಕಾರ, ಬಂಧಿತ ಮೀನುಗಾರರು ನೆಡುಂತೀವು ಬಳಿಯ ಪಾಲ್ಕ್ ಬೇ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಮೀನುಗಾರರನ್ನು ವಿಚಾರಣೆಗಾಗಿ ಮನ್ನಾರ್ ಬಂದರಿಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.