Tuesday, August 9, 2022

Latest Posts

ಭಾರತ ಚೀನಾ ಗಡಿ ಭಾಗದಲ್ಲಿ ರಸ್ತೆ ನಿರ್ಮಿಸುತ್ತಿದ್ದ ಕಾರ್ಮಿಕರು ನಿಗೂಢ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯ ಬಳಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 18 ಮಂದಿ ಕಾರ್ಮಿಕರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವ ಶವವಾಗಿ ಪತ್ತೆಯಾಗಿದ್ದಾರೆ.
ಈ ಕಾರ್ಮಿಕರು ಕುರುಂಗ್ ಕುಮೇ ಜಿಲ್ಲೆಯ ಡ್ಯಾಮಿನ್‌ನಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದರು. ಇವರೆಲ್ಲರು ಜುಲೈ 5 ರಿಂದ ಎಲ್ಲಾ 19 ಮಂದಿ ಯೋಜನಾ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಈ ಪೈಕಿ ಓರ್ವನ ಶವ ಹತ್ತಿರದ ನದಿಯಲ್ಲಿ ಪತ್ತೆಯಾಗಿದೆ. ಭಾರತ-ಚೀನಾ ಗಡಿಯ ಸಮೀಪವಿರುವ ಡಾಮಿನ್ ವೃತ್ತದಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಈ ಕಾರ್ಮಿಕರನ್ನು ಕರೆತರಲಾಗಿತ್ತು.
ಕಾರ್ಮಿಕರು ಹಬ್ಬವನ್ನು ಆಚರಿಸಲು ರಜೆ ನೀಡುವಂತೆ ಗುತ್ತಿಗೆದಾರರಲ್ಲಿ ಮನವಿ ಮಾಡಿದ್ದು, ಆದರೆ ಅನುಮತಿ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಅವರು ತಪ್ಪಿಸಿಕೊಂಡಿದ್ದಾರೆ‌ ಎನ್ಮಲಾಗಿದೆ. ಕುರುಂಗ್ ಕುಮೇ ಜಿಲ್ಲೆ ದಟ್ಟ ಕಾಡನ್ನು ಹೊಂದಿದ್ದು, ಕಾರ್ಮಿಕರು ಇದರ ನಡುವೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss