ಹಳೇ ಚಾಳಿ ಮುಂದುವರಿಸಿದ ಡ್ರ್ಯಾಗನ್: ಮಾತುಕತೆ ಮುಗಿಯುತ್ತಿದ್ದಂತೇ ಮತ್ತೆ ಉದ್ಧಟತನ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ ಕುರಿತಾಗಿ ವಿವಾದಗಳನ್ನು ಬಗೆಹರಿಸಲು ಸೇನಾ ಕಮಾಂಡರ್‌ ಮಟ್ಟದ 16ನೇ ಸುತ್ತಿನ ಮಾತುಕತೆ ಮುಕ್ತಾಯವಾಗಿದ್ದು ಉಭಯದೇಶಗಳು ಗಡಿಯಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಅಗತ್ಯವನ್ನು ಪುನರುಚ್ಚರಿಸಿದ್ದು ತಮ್ಮ ಸೇನಾ ಉಪಸ್ಥಿತಿಗಳನ್ನು ಕಡಿಮೆ ಮಾಡುವುದಾಗಿ ಹೇಳಿವೆ. ಆದರೆ ಮಾತು ಕತೆ ಮುಕ್ತಾಯವಾಗುತ್ತಿದ್ದಂತೆ ಚೀನಾ ತನ್ನ ಹಳೇ ಚಾಳಿ ಮುಂದುವರೆಸಿದೆ.

ಇದೇ ವಿಷಯದ ಕುರಿತಾಗಿ 15 ನೇ ಸುತ್ತಿನ ಮಾತುಕತೆಯಲ್ಲಿಯೂ ಕೂಡ ತಮ್ಮ ಸೇನಾ ಉಪಸ್ಥಿತಿಗಳನ್ನು ಕಡಿಮೆ ಗೊಳಿಸಲು ಉಭಯ ದೇಶಗಳು ಸಮ್ಮತಿಸಿದ್ದವು ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಚೀನಾ ತನ್ನ ಉದ್ಧಟತನವನ್ನು ಮುಂದುವರಿಸಿದ್ದು ಚೀನಾದೊಂದಿಗಿನ ಭಾರತದ ಮಾತುಕತೆ ಮುಕ್ತಾಯವಾಗುತ್ತಿದ್ದಂತೆ ಭಾರತದ ಪ್ಯಾಂಗಾಂಗ್‌ ಸರೋವರದ ಮೇಲೆ ಚೀನಾ ಹೆಲಿಕಾಪ್ಟರ್‌ ಗಳು ಹಾರಾಡುತ್ತಿರುವ ವೀಡಿಯೋ ವೊಂದು ಮುನ್ನೆಲೆಗೆ ಬಂದಿದೆ. ಚೀನಾ ಸೈನಿಕರು ಪ್ಯಾಂಗಾಂಗ್‌ ಲೇಕ್‌ ಬಳಿ ಮಿಲಿಟರಿ ಕಾರ್ಯಾಚರಣೆ ಮಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!