ಪುರಿ ಕಡಲತೀರದಲ್ಲಿ 18 ವರ್ಷದ ಯುವತಿ ಶವ ಪತ್ತೆ: ಸಿಬಿಐ ತನಿಖೆಗೆ ಕುಟುಂಬ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಡಿಶಾದ ಪುರಿಯ ಕಡಲತೀರದಲ್ಲಿ 18 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆಯ ಕುಟುಂಬವು ಸಿಬಿಐ ತನಿಖೆಗೆ ಒತ್ತಾಯಿಸಿದೆ. ಆಕೆಯನ್ನು ಕಿಡ್ನಾಪ್ ಮಾಡಿ ಆಸಿಡ್ ಸುರಿದು ಕೊಂದು ಹಾಕಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಾಧಿಕಾ ಕುಶುವಾ ಎಂದು ಗುರುತಿಸಲಾದ ಹುಡುಗಿ ಮಧ್ಯಪ್ರದೇಶದ ನಿವಾಸಿಯಾಗಿದ್ದು, ಅವಳು ತನ್ನ ಹೆತ್ತವರು ಮತ್ತು ಸಹೋದರನೊಂದಿಗೆ ಪುರಿಗೆ ಭೇಟಿ ನೀಡಿದ್ದಳು. ನವೆಂಬರ್ 23 ರಂದು ಬಟ್ಟೆ ತೆಗೆದುಕೊಳ್ಳಲು ಹೊರಗೆ ಹೋದಾಗ ನಾಪತ್ತೆಯಾಗಿದ್ದಳು. ಅವಳು ಹಿಂತಿರುಗದಿದ್ದಾಗ, ಅವಳ ಮನೆಯವರು ಅವಳನ್ನು ಹುಡುಕಲು ಪ್ರಾರಂಭಿಸಿದರು. ನವೆಂಬರ್ 26 ರಂದು ದೇಹದ ಮೇಲೆ ತೀವ್ರವಾದ ಗಾಯಗಳೊಂದಿಗೆ ಆಕೆ ಒಳ ಉಡುಪುಗಳಲ್ಲಿ ಪುರಿಯ ಕಡಲ ತೀರದಲ್ಲಿ ಆಕೆಯ ದೇಹ ಸಿಕ್ಕಿತ್ತು.
ಆಕೆಯ ತಂದೆ ಪ್ರಹ್ಲಾದ್ ಕುಶುವ ಅವರು ಆಕೆಯ ಕಿವಿಯೋಲೆ, ಚಿನ್ನದ ಮೂಗು ಪಿನ್, ಕೈಯಲ್ಲಿ ಕೆಂಪು ರಿಬ್ಬನ್ ಮತ್ತು ಪಾದದ ಮೇಲೆ ಕಪ್ಪು ರಿಬ್ಬನ್ ಅನ್ನು ಗುರುತಿಸಿದ್ದಾರೆ.
ಆಕೆಯನ್ನು ಕಿಡ್ನಾಪ್ ಮಾಡಿ ಆಸಿಡ್ ಹಾಕಿ ಕೊಲೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕುಟುಂಬದವರ ಆಗಮನದ ಮೊದಲು ನಡೆಸಲಾದ ಮರಣೋತ್ತರ ಪರೀಕ್ಷೆಯ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. “ನಮ್ಮ ಮಗಳ ಅನುಮಾನಾಸ್ಪದ ಸಾವಿನ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!