ಪೋಷಕಾಂಶಗಳಿಂದ ಕೂಡಿದ ಕೇಸರ್ ಪಿಸ್ತಾ ಲಸ್ಸಿ ಮಾಡೋದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:

ಕೇಸರಿ- ಒಂದು ಚಮಚ
ಹಾಲು – ಸ್ವಲ್ಪ
ಮೊಸರು – ಒಂದು ಕಪ್
ಸಕ್ಕರೆ – ಒಂದು ಕಪ್
ಪಿಸ್ತಾ – 2 ಚಮಚ
ಐಸ್ ತುಂಡು – ಒಂದೆರೆಡು

ಮಾಡುವ ವಿಧಾನ: 

ಪಿಸ್ತಾವನ್ನು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹಾಗೆಯೇ ಹಾಲಿನಲ್ಲಿ ಕೇಸರಿ ಹಾಕಿ. ಈಗ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ ತಾಜಾ ಮೊಸರು ಸೇರಿಸಿ ಮತ್ತು ಒಂದು ನಿಮಿಷ ರುಬ್ಬಿಕೊಳ್ಳಿ. ನಂತರ ಸಕ್ಕರೆ, ನೆನೆಸಿದ ಪಿಸ್ತಾ ಮತ್ತು ಹಾಲಿನಲ್ಲಿ ನೆನೆಸಿದ ಕೇಸರಿ ಸೇರಿಸಿ. ಇವೆಲ್ಲವೂ ನಯವಾದ ಮಿಶ್ರಣವಾಗುವವರೆಗೆ ರುಬ್ಬಿಕೊಳ್ಳಿ. ಸಕ್ಕರೆಯ ಬದಲಿಗೆ ಸಕ್ಕರೆ ಪುಡಿಯನ್ನು ಬಳಸಿದರೆ, ಅದು ಲಸ್ಸಿಯಲ್ಲಿ ವೇಗವಾಗಿ ಕರಗುತ್ತದೆ. ಸರ್ವಿಂಗ್ ಗ್ಲಾಸ್‌ನಲ್ಲಿ ರುಬ್ಬಿದ ಲಸ್ಸಿಯನ್ನು ಸುರಿಯಿರಿ ಮತ್ತು ಅದಕ್ಕೆ ಸ್ವಲ್ಪ ತುರಿದ ಪಿಸ್ತಾ, ಬಾದಾಮಿ ಮತ್ತು ಸ್ವಲ್ಪ ಕೇಸರಿ ಸೇರಿಸಿ ಕಲರ್‌ಫುಲ್ ಮಾಡಿ. ಅಷ್ಟೇ….ರೆಸ್ಟೊರೆಂಟ್ ಸ್ಟೈಲ್ ಕೇಸರ್ ಪಿಸ್ತಾ ಲಸ್ಸಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!