ವಿವಾಹವಾಗಿ 9 ಮಕ್ಕಳಾದ ಬಳಿಕ ಹಿಂದೂ ಸಂಪ್ರದಾಯದಂತೆ ಮರು ಮದುವೆಯಾದ ಮುಸ್ಲಿಂ ದಂಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ಮುಸ್ಲಿಂ ದಂಪತಿ ಶನಿವಾರ ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ದಂಪತಿಗೆ 18 ವರ್ಷಗಳ ಹಿಂದೆ ಮುಸ್ಲಿಂ ಸಂಪ್ರದಾಯದಂತೆ  ನಿಕಾಹ್ ಆಗಿದ್ದರು. ಈ ದಂಪತಿಗೆ ಈಗಗಲೇ ಒಂಬತ್ತು ಮಕ್ಕಳಿದ್ದಾರೆ.
ಜೌನ್‌ಪುರದ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಅವರ ವಿವಾಹ ನೆರವೇರಿತು. ಅಮೇರಿಕನ್ ಮೂಲದ ಮುಸ್ಲಿಂ ದಂಪತಿಗಳಾದ ಕಿಯಾಮಾ ದಿನ್ ಖಲೀಫಾ ಮತ್ತು ಕೇಶ ಖಲೀಫಾ ಅವರು ಭಾರತ ಪ್ರವಾಸದಲ್ಲಿದ್ದಾಗ ಈ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಮಾರುಹೋಗಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲು ನಿರ್ಧರಿಸಿದರು.
ವಾರಣಾಸಿಯ ಘಾಟ್‌ಗಳು, ದೇವಾಲಯಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದಾಗ ದಂಪತಿಗಳು ಹಿಂದೂ ಸಂಸ್ಕೃತಿಯಿಂದ ಎಷ್ಟು ಆಕರ್ಷಿತರಾದರು ಎಂದರೆ ತಾವು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಬೇಕು ಎಂದು ಆಸೆಪಟ್ಟರು.
ದೇವಸ್ಥಾನದ ಅರ್ಚಕ ರವಿಶಂಕರ್ ಗಿರಿ ಅವರ ಪ್ರಕಾರ, ದಂಪತಿಗಳು 40 ರ ಹರೆಯದವರಾಗಿದ್ದು, ಅವರು ಈಗಾಗಲೇ ಮುಸ್ಲಿಂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾರೆ. ವರ ಕಿಯಾಮಾ ದಿನ್ ಖಲೀಫಾ ಅವರು ಒಂಬತ್ತು ಮಕ್ಕಳ ತಂದೆ ಎಂದು ಹೇಳಿದರು. ಇನ್ನೊಂದು ವಿಶೇಷವೆಂದರೆ ವಧು ಕೇಶ ಖಲೀಫಾ ಅವರ ಅಜ್ಜ ಭಾರತೀಯ ಮೂಲದ ಹಿಂದೂವಾಗಿದ್ದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದರು.
ವಿವಾಹದ ಎಲ್ಲಾ ವಿಧಿವಿಧಾನಗಳು ಹಿಂದೂ ಪದ್ಧತಿಯಂತೆ ನೆರವೇರಿದೆ ಎಂದು ದಂಪತಿ ಜತೆಗಿದ್ದ ಪಂಡಿತ್ ಗೋವಿಂದ ಶಾಸ್ತ್ರಿ ತಿಳಿಸಿದ್ದಾರೆ.
ಅಮೆರಿಕದ ಮುಸ್ಲಿಂ ದಂಪತಿ, ಕಿಯಾಮಾ ದಿನ್ ಖಲೀಫಾ ಮತ್ತು ಅವರ ಪತ್ನಿ ಕೇಶ ತ್ರಿಲೋಚನ್ ಮಹಾದೇವ ದೇವಸ್ಥಾನದಲ್ಲಿ ಏಳು ಸುತ್ತುಗಳ ಸಪ್ತಪದಿ ತುಳಿದು, ಹಿಂದೂ ಸಂಪ್ರದಾಯಗಳ ಪ್ರಕಾರ ಬೆಂಕಿಯನ್ನು ಸಾಕ್ಷಿಯಾಗಿ ಪರಿಗಣಿಸಿ ವಿವಾಹವಾಗಿದ್ದಾರೆ. ಮದುವೆಯ ಮರುದಿನ ಅವರು ಮದುವೆ ನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದ ಬಳಿಕ ವಿವಾಹ ನೋಂದಣಿ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!