ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಯಾರ್ಕ್‌ನ ಬ್ರಾಂಕ್ಸ್ ಟ್ವಿನ್ ಪಾರ್ಕ್ ಅಪಾರ್ಟ್‌ಮೆಂಟ್ ಪ್ರದೇಶದಲ್ಲಿರುವ 19 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ಬೆಂಕಿ ಬಿದ್ದಿದ್ದು, 9 ಮಕ್ಕಳು ಸೇರಿ 19ಮಂದಿ ಮೃತಪಟ್ಟಿದ್ದಾರೆ.
ಅಗ್ನಿ ಅವಗಢದಲ್ಲಿ 60 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಅನೇಕರು ಹೊಗೆಯಿಂದ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಾರೆ. ಬೆಂಕಿಯ ಹೊಗೆ ಕಾಣುತ್ತಿದ್ದಂತೆ, ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ನವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವೇಗವಾಗಿ ಆಗಮಿಸಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಜೀವ ಇದ್ದು, ಉಸಿರಾಡಲು ಕಷ್ಟಪಡುತ್ತಿದ್ದವರನ್ನು ಮೊದಲು ಹೊರಗೆ ಕರೆತರಲಾಯಿತು. ಅವರನ್ನು ಉಳಿದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತದನಂತರ ಮೃತದೇಹಗಳನ್ನು ಹೊರತೆಗೆಯಲಾಯಿತು ಎಂದು ಸಿಬ್ಬಂದಿ ಹೇಳಿದ್ದಾರೆ.
ಈ ರೀತಿ ಅಗ್ನಿ ದುರಂತ ಇತ್ತೀಚೆಗೆ ನಮ್ಮಲ್ಲಿ ನಡೆದೇ ಇಲ್ಲ. ಇದನ್ನು ಊಹಿಸಲು ಅಸಾಧ್ಯವಾದ ಭೀಕರ ಪರಿಸ್ಥಿತಿ ಇಲ್ಲಿದೆ ಎಂದು ಅಗ್ನಿ ಶಾಮಕ ಇಲಾಖೆ ಆಯುಕ್ತ ನಿಗ್ರೋ ಹೇಳಿದ್ದಾರೆ.