ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವು: ಸಿಎಂ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಆಕ್ರೋಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗು ವಿಪಕ್ಷಗಳ ನಡುವೆ ತ್ರೀವ ಮಾತಿನ ಚಕಮಕಿ ನಡೆಯಿತು.

ಇಲ್ಲಿನ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಈ ಘಟನೆ ಕುರಿತು ಸರಕಾರದ ವಿರುದ್ಧ ವಿಪಕ್ಷಗಳು ಕೋಲಾಹಲಎಬ್ಬಿಸಿದರು. ಸಾವಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಹೊಣೆ ಎಂದು ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದೆ.ಇದರಿಂದ ತಾಳ್ಮೆ ಕಳೆದುಕೊಂಡ ನಿತೀಶ್ ಕುಮಾರ್, ಕೋಪದಿಂದ ಅವರು ಈಗ ಎನಾಗಿದೆ. ನೀವೆಲ್ಲ ಬಾಯಿಮುಚ್ಚಿಕೊಂಡರೆ ಸರಿಯಾಗಿದೆ ಎಂದು ಸಿಟ್ಟಿನಿಂದಲೇ ಹೇಳಿದರು.

ಮುಖ್ಯಮಂತ್ರಿಗಳ ಈ ವರ್ತನೆಯಿಂದ ಬಿಜೆಪಿ ಶಾಸಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಗಲಾಟೆ ಮಾಡಿದರು. ಚಪ್ಪಾಳೆ ತಟ್ಟಿ ಗಲಾಟೆ ಮಾಡಿದ ಅವರು, ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು. ನಿತೀಶ್‌ ಕುಮಾರ್‌ಗೆ ಬುದ್ಧಿ ಇಲ್ಲ ಎನ್ನವ ಘೋಷಣೆಗಳನ್ನು ಕೂಗಿದರು. ಭೋಜನ ವಿರಾಮದ ಬಳಿಕವೂ ಅವರ ಗಲಾಟೆ ಮುಂದವರಿದಿತ್ತು. ಈ ಗದ್ದಲದಿಂದಾಗಿ ಸದನದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!