1996 ರ ಡ್ರಗ್ಸ್ ಜಪ್ತಿ ಪ್ರಕರಣ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ದೋಷಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

1996 ರಲ್ಲಿ ಡ್ರಗ್ಸ್ ಜಪ್ತಿ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ದೋಷಿ ಎಂದು ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಪಾಲಂಪುರ ಟೌನ್ ನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

1996 ರಲ್ಲಿ ವಕೀಲರು ತಂಗಿದ್ದ ಪಾಲನ್‌ಪುರದ ಹೊಟೇಲ್ ಕೊಠಡಿಯಿಂದ ಪೊಲೀಸರು ಡ್ರಗ್ಸ್ ವಶಪಡಿಸಿಕೊಂಡಿದ್ದರು ಎಂದು ಹೇಳುವ ಮೂಲಕ ರಾಜಸ್ಥಾನ ಮೂಲದ ವಕೀಲರನ್ನು ತಪ್ಪಾಗಿ ಸಿಲುಕಿಸಿದ ಆರೋಪದ ಮೇಲೆ ಸೆಷನ್ಸ್ ನ್ಯಾಯಾಲಯ ಭಟ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.

ಸಂಜೀವ್ ಭಟ್ ಅವರನ್ನು 2015 ರಲ್ಲಿ ಐಪಿಎಸ್ ನಿಂದ ವಜಾಗೊಳಿಸಲಾಗಿತ್ತು. ವಜಾಗೊಳ್ಳುವುದಕ್ಕೂ ಮುನ್ನ ಸಂಜೀವ್ ಭಟ್ ಬನಸ್ಕಾಂತ ಜಿಲ್ಲೆಯ ಎಸ್ ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ನೇತೃತ್ವದ ಜಿಲ್ಲಾ ಪೊಲೀಸರು ರಾಜಸ್ಥಾನದ ವಕೀಲ ಸುಮೇರ್‌ಸಿಂಗ್ ರಾಜಪುರೋಹಿತ್ ಅವರನ್ನು 1996 ರಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಕಾಯ್ದೆ (ಎನ್‌ಡಿಪಿಎಸ್ ಆಕ್ಟ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದರು. ವಕೀಲರು ತಂಗಿದ್ದ ಪಾಲನ್‌ಪುರದ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.

ಆದಾಗ್ಯೂ, ರಾಜಸ್ಥಾನದ ಪಾಲಿಯಲ್ಲಿರುವ ವಿವಾದಿತ ಆಸ್ತಿಯನ್ನು ವರ್ಗಾಯಿಸಲು ಒತ್ತಾಯಿಸಲು ಬನಸ್ಕಾಂತ ಪೊಲೀಸರು ರಾಜಪುರೋಹಿತ್ ಅವರನ್ನು ತಪ್ಪಾಗಿ ಸಿಲುಕಿಸಿದ್ದಾರೆ ಎಂದು ರಾಜಸ್ಥಾನ ಪೊಲೀಸರು ವಾದಿಸಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!