ಮುಂಬೈ ಪರ 200ನೇ ಪಂದ್ಯ: ರೋಹಿತ್​ಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್​ ಶರ್ಮ(Rohit Sharma) ಅವರು ಮುಂಬೈ ಇಂಡಿಯನ್ಸ್(Mumbai Indians)​ ಪರ 200 ಪಂದ್ಯವನ್ನು ಪೂರ್ತಿಗೊಳಿಸಿದರು.

ಇದಕ್ಕಾಗಿ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(Sachin Tendulkar) ಅವರು ರೋಹಿತ್​ಗೆ ವಿಶೇಷ ಜೆರ್ಸಿಯನ್ನು ನೀಡಿ ಗೌರವಿಸಿದರು.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದುಕೊಂಡಿದೆ.

ರೋಹಿತ್​ ಅವರು ಡೆಕ್ಕನ್​ ಚಾರ್ಜಸ್​ ವಿರುದ್ಧ ಆಡುವ ಮೂಲಕ ಐಪಿಎಲ್​ ಜರ್ನಿ ಆರಂಭಿಸಿದರು. ಇದುವರೆಗೆ ಒಟ್ಟು 245 ಪಂದ್ಯಗಳನ್ನು ಆಡಿದ್ದು ಈ ಪೈಕಿ 200 ಪಂದ್ಯಗಳನ್ನು ಮುಂಬೈ ತಂಡದ ಪರ ಆಡಿದ್ದಾರೆ. ಜತೆಗೆ 5 ಟ್ರೋಫಿಗಳನ್ನು ಕೂಡ ಗೆದ್ದು ಕೊಟ್ಟಿದ್ದಾರೆ. ಒಟ್ಟಾರೆಯಾಗಿ 6 ಐಪಿಎಲ್​ ಟ್ರೋಫಿ ಗೆದ್ದ ಸಾಧನೆ ಇವರದ್ದಾಗಿದೆ. ಒಂದು ಟ್ರೋಫಿ ಡೆಕ್ಕನ್ ಪರ ಗಿಲ್​ ಕ್ರಿಸ್ಟ್​ ನಾಯಕತ್ವದಲ್ಲಿ ಜಯಿಸಿದ್ದರು.

2011 ರಲ್ಲಿ ಮುಂಬೈ ಸೇರಿದ ರೋಹಿತ್​ ಇದುವರೆಗೂ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಈ ಬಾರಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ. ಮುಂಬೈ ಪರ 195 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್​ ನಡೆಸಿ ಒಂದು ಶತಕ ಮತ್ತು 34 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಜೇಯ 109* ಅವರ ಗರಿಷ್ಠ ಸ್ಕೋರ್ ಆಗಿದೆ. ಒಟ್ಟಾರೆಯಾಗಿ ಐಪಿಎಲ್​ನಲ್ಲಿ 6254 ರನ್​ ಬಾರಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!