1999ರ ಕೊಲೆ ಪ್ರಕರಣ: ಭೂಗತ ಪಾತಕಿ ಚೋಟಾ ರಾಜನ್ ಖುಲಾಸೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

1999 ರಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸದಸ್ಯನ ಕೊಲೆಗೆ ಸಂಬಂಧಿಸಿ ಮುಂಬೈನ ಸೆಷನ್ಸ್ ನ್ಯಾಯಾಲಯವು ಛೋಟಾ ರಾಜನ್ನನ್ನು ಖುಲಾಸೆ ಮಾಡಿದೆ.

ಡಿಸೆಂಬರ್ 17 ರಂದು ರಾಜನ್ ಅವರ ಖುಲಾಸೆ ಮನವಿಯನ್ನು ನ್ಯಾಯಾಲಯವು ಅಂಗೀಕರಿಸಿತ್ತು. ಇಂದು ಈ ಸಂಬಂಧ ಆದೇಶವನ್ನು ನೀಡಿದೆ.

ಪ್ರಾಸಿಕ್ಯೂಷನ್ ಪ್ರಕಾರ, ದಾವೂದ್ ಸದಸ್ಯನೆಂದು ಹೇಳಲಾದ ಅನಿಲ್ ಶರ್ಮಾ, ಸೆಪ್ಟೆಂಬರ್ 2, 1999 ರಂದು ಮುಂಬೈ ಉಪನಗರ ಅಂಧೇರಿಯಲ್ಲಿ ರಾಜನ್ ನ ವ್ಯಕ್ತಿಗಳಿಂದ ಗುಂಡೇಟಿಗೀಡಾಗಿ ಕೊಲ್ಲಲ್ಪಟ್ಟಿದ್ದರು. ಸೆಪ್ಟಂಬರ್ 12, 1992 ರಂದು ಇಲ್ಲಿನ ಜೆಜೆ ಆಸ್ಪತ್ರೆಯಲ್ಲಿ ಶೂಟೌಟ್ ನಡೆಸಿದ ತಂಡದಲ್ಲಿ ಶರ್ಮಾ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.

ದಾವೂದ್ ಮತ್ತು ರಾಜನ್ ಗ್ಯಾಂಗ್ ನಡುವಿನ ಪೈಪೋಟಿಯಿಂದಾಗಿ ಶರ್ಮಾ ಕೊಲ್ಲಲ್ಪಟ್ಟರು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ನ್ಯಾಯಾಧೀಶರು, ತಮ್ಮ ಆದೇಶದಲ್ಲಿ ಮಾಹಿತಿದಾರ (ದೂರುದಾರರು) ಹೇಳಿದ ಮಾತುಗಳನ್ನು ಹೊರತುಪಡಿಸಿ, ಈ ಅರ್ಜಿದಾರರ (ರಾಜನ್) ವಿರುದ್ಧ ಯಾವುದೇ ದೋಷಾರೋಪಣೆಯ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ತರಲಿಲ್ಲ ಅಥವಾ ಸಂಗ್ರಹಿಸಲಿಲ್ಲ ಎಂದು ಗಮನಿಸಿದೆ. ಇದೇ ಆಧಾರದಲ್ಲಿ ಛೋಟಾರಾಜನ್ ನನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!