Monday, March 27, 2023

Latest Posts

ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ 2.39 ಬಿಲಿಯನ್‌ ಡಾಲರ್‌ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾರ್ಚ್‌ 10 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.39 ಬಿಲಿಯನ್‌ ಡಾಲರುಗಳಷ್ಟು ಕಡಿಮೆಯಾಗಿ 560.003 ಬಿಲಿಯನ್‌ ಡಾಲರ್‌ ಗೆ ತಲುಪಿದೆ. ಈ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ ಸಾಪ್ತಾಹಿಕ ಡೇಟಾ ಬಿಡುಗಡೆ ಮಾಡಿ ಕುಸಿತವನ್ನು ಉಲ್ಲೇಖಿಸಿದೆ. ಮಾರ್ಚ್ 3 ರಂದು ಕೊನೆಗೊಂಡ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹವು 1.46 ಬಿಲಿಯನ್‌ ಡಾಲರುಗಳಷ್ಟು ಏರಿಕೆ ದಾಖಲಿಸಿತ್ತು.

ಈ ಕುಸಿತದ ಪರಿಣಾಮ ವಿದೇಶಿ ವಿನಿಮಯ ಸಂಗ್ರಹವು 2022ರ ಡಿಸೆಂಬರ್‌ ತಿಂಗಳ ನಂತರದ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ವಿದೇಶಿ ಕರೆನ್ಸಿ ಮಾರುಕಟ್ಟೆಯಲ್ಲಿ ರೂಪಾಯಿ ಕುಸಿತವನ್ನು ತಡೆಗಟ್ಟಲು ಆರ್‌ಬಿಐ ವಿದೇಶಿ ಕರೆನ್ಸಿಯನ್ನು ಮಾರಾಟ ಮಾಡಿದ ಪರಿಣಾಮ ಈ ಕುಸಿತ ಸಂಭವಿಸಿದೆ. ಕಳೆದ ವಾರದಲ್ಲಿ ರೂಪಾಯಿಯು ಭಾರೀ ಕುಸಿತ ದಾಖಲಿಸಿತ್ತು. ದೇಶದ ಚಿನ್ನದ ನಿಕ್ಷೇಪಗಳು ಮತ್ತು ಎಸ್‌ಡಿಆರ್ ಹಿಡುವಳಿಗಳು ಸಹ ಕುಸಿತವನ್ನು ದಾಖಲಿಸಿದ್ದು ಎರಡೂ ಮೀಸಲುಗಳು ಕ್ರಮವಾಗಿ 110 ಮಿಲಿಯನ್‌ ಡಾಲರುಗಳು ಹಾಗು 53 ಮಿಲಿಯನ್‌ ಡಾಲರ್‌ ಗಳಷ್ಟು ಕುಸಿದಿವೆ. ಚಿನ್ನ ಸಂಗ್ರಹವು 41.92 ಬಿಲಿಯನ್‌ ಡಾಲರ್‌ ಗಳಷ್ಟಿದ್ದರೆ ಎಸ್‌ಡಿಆರ್ ಹಿಡುವಳಿಗಳು 18.12 ಬಿಲಿಯನ್‌ ಡಾಲರುಗಳಷ್ಟಿವೆ. IMF ನಲ್ಲಿ ದೇಶದ ಮೀಸಲು ಸ್ಥಾನವು USD 11 ಮಿಲಿಯನ್‌ನಿಂದ ಕುಸಿದು USD 5.1 ಶತಕೋಟಿಗೆ ತಲುಪಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!