FESTIVAL FOOD | ಯುಗಾದಿ ಹಬ್ಬಕ್ಕೆ ಸಿಂಪಲ್‌ ಕಾಯಿ ಹೋಳಿಗೆ ರೆಸಿಪಿ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಬ್ಬಕ್ಕೆ ಸಿಹಿ ಅಡುಗೆ ಮಾಡುವುದು ಸರ್ವೇ ಸಾಮಾನ್ಯ. ಆದ್ರೆ ಈ ಭಾರಿಯ ಯುಗಾದಿ ಹಬ್ಬಕ್ಕೆ ವಿಶೇಷವಾಗಿ ಮತ್ತು ಸರಳವಾಗಿ ಒಮ್ಮೆ ಕಾಯಿ ಹೋಳಿಗೆ ರೆಸಿಪಿ ಮಾಡಿ ಸವಿಯಿರಿ.

ಬೇಕಾಗುವ ಸಾಮಗ್ರಿಗಳು :
ಚಿರೋಟಿ/ಸೂಜಿ ರವೆ
ಮೈದಾ
ಅರಿಶಿಣ ಪುಡಿ
ಚಮಚ ನೀರು
ಕಪ್‌ ತುರಿದ ತೆಂಗಿನಕಾಯಿ
ಬೆಲ್ಲ
ಏಲಕ್ಕಿ ಪುಡಿ
ಎಣ್ಣೆ

ಮಾಡುವ ವಿಧಾನ :
* ಒಂದು ದೊಡ್ಡ ಬೌಲ್‌ಗೆ ಸೂಜಿ ರವೆ ಹಾಕಿ. ನಂತರ ಮೈದಾ ಹಾಗೂ ಅರಿಶಿಣ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* 2 ಚಮಚ ಎಣ್ಣೆ ಹಾಕಿ, ನಂತರ ನೀರು ತೆಗೆದುಕೊಂಡು ಸ್ವಲ್ಪ-ಸ್ವಲ್ಪ ಸೇರಿಸುತ್ತಾ ಮಿಕ್ಸ್ ಮಾಡಿ.
* ನಂತರ ಬೌಲ್‌ನ ಮುಚ್ಚಿ 5 ನಿಮಿಷ ಬಿಡಿ.
* ಈಗ ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ನುಣ್ಣನೆ ರುಬ್ಬಿಕೊಳ್ಳಿ.
* ಈಗ ಬೆಲ್ಲದ ಪಾಕ ತಯಾರಿಸಿ, ಬೆಲ್ಲದ ಪಾಕ ಗಟ್ಟಿಯಾಗುತ್ತಾ ಬರುವಾಗ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ ತಣ್ಣಗಾಗಲು ಬಿಡಿ.
* ಈಗ ಮೈದಾ ರವೆ ಮಿಶ್ರಣದಿಂದ ಚಪಾತಿಗೆ ಉಂಡೆ ಕಟ್ಟಿದಂತೆ ಕಟ್ಟಿ.
* ಒಂದು ಪ್ಲೇಟ್‌ ಅಥವಾ ಚಪಾತಿ ಮಣೆ ಮೇಲೆ ಪ್ಲಾಸ್ಟಿಕ್‌ ಹಾಕಿ ಎಣ್ಣೆ ಸವರಿ ಮೈದಾ ಮಿಶ್ರಣ ಲಟ್ಟಿಸಿ, ಮಧ್ಯದಲ್ಲಿ ಕೊಬ್ಬರಿ-ಬೆಲ್ಲ ಮಿಶ್ರಣ ಹಾಕಿ ಮತ್ತೆ ಉಂಡೆ ಕಟ್ಟಿ ಲಟ್ಟಿಸಿ.
* ಈಗ ದೋಸೆ ತವಾ ಉರಿ ಮೇಲೆ ಇಡಿ, ಅದಕ್ಕೆ ಎಣ್ಣೆ ಅಥವಾ ತುಪ್ಪ ಸವರಿ ಎರಡು ಬದಿ ಬೇಯಿಸಿದರೆ ಕಾಯಿ ಹೋಳಿಗೆ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!