ಮಂತ್ರಾಲಯ ಶ್ರೀಮಠಕ್ಕೆ ಹರಿದುಬಂತು ರಾಯರ ಭಕ್ತರಿಂದ 2.95 ಕೋಟಿ ರೂ. ಕಾಣಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಡಿಸೆಂಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬರೋಬ್ಬರಿ 2,95,74,004 ರೂ. ಕಾಣಿಕೆ ಸಂಗ್ರಹವಾಗಿದೆ.

ಈ ಕಾಣಿಕೆಯಲ್ಲಿ 2,89,63, 504 ರೂ. ಕರೆನ್ಸಿ ನೋಟುಗಳಾಗಿದ್ದರೆ, 6,10,500 ರೂ. ನಾಣ್ಯಗಳಾಗಿವೆ. ಇನ್ನು 71 ಗ್ರಾಂ ಚಿನ್ನ ಹಾಗೂ 439 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ ಎಂದು ಮಠದ ಮೂಲಗಳು ತಿಳಿಸಿವೆ.
ಕಾಣಿಕೆ ಎಣಿಕೆ ಸಂದರ್ಭ ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು, ಸಿಬ್ಬಂದಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!