ಮಾನಹಾನಿ ಪ್ರಕರಣದಲ್ಲಿ ಮಾಜಿ ಸೇನಾಧಿಕಾರಿಗೆ 2 ಕೋಟಿ ರೂ. ಪರಿಹಾರ ನೀಡಿ: ತರುಣ್ ತೇಜ್ಪಾಲ್ ಗೆ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾನಹಾನಿ ಪ್ರಕರಣದಲ್ಲಿ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರಿಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪತ್ರಕರ್ತರಾದ ತರುಣ್ ತೇಜ್ಪಾಲ್, ಅನಿರುದ್ಧ್ ಬೆಹ್ಲ್, ಮ್ಯಾಥ್ಯೂ ಸ್ಯಾಮ್ಯುಯೆಲ್ ಮತ್ತು ತೆಹೆಲ್ಕಾ ಡಾಟ್ ಕಾಮ್ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

2001ರಲ್ಲಿ ತೆಹಲ್ಕಾ ಕುಟುಕು ಕಾರ್ಯಾಚರಣೆ ವೇಳೆ ಅಹ್ಲುವಾಲಿಯಾ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹೇಳಿತ್ತು.

ಇದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ಅಹ್ಲುವಾಲಿಯಾ ತನ್ನ ಘನತೆ ಕಳೆದುಕೊಂಡಿರುವುದು ಮಾತ್ರವಲ್ಲದೆ ಅವರ ಚಾರಿತ್ರ್ಯಕ್ಕೂ ಕಳಂಕ ಉಂಟಾಗಿದೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಈ ಆದೇಶ ನೀಡಿದೆ.

ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು, ಭಾರತೀಯ ಸೇನಾ ಅಧಿಕಾರಿಗೆ ಮಾನಹಾನಿ ಮಾಡಿದ್ದಕ್ಕಾಗಿ ತರುಣ್ ತೇಜ್ಪಾಲ್ ಮತ್ತು ಇಬ್ಬರು ಪತ್ರಕರ್ತರಾದ ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು 2 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆದೇಶಿಸಿದೆ.

ಈ ಮೊತ್ತವನ್ನು ಸುದ್ದಿ ಪೋರ್ಟಲ್ Tehelka.com, ಅದರ ಮಾಲೀಕ ಕಂಪನಿ M/s ಬಫಲೋ ಕಮ್ಯುನಿಕೇಷನ್ಸ್, ಅದರ ಮಾಲೀಕರಾದ ತರುಣ್ ತೇಜ್ಪಾಲ್ ಮತ್ತು ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಪಾವತಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!