2 ದಿನಗಳ ಬಿಹಾರ ಪ್ರವಾಸ: ಪಾಟ್ನಾಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎರಡು ದಿನಗಳ ಬಿಹಾರ ಭೇಟಿಗಾಗಿ ಶನಿವಾರ ರಾತ್ರಿ ಪಾಟ್ನಾಕ್ಕೆ ಆಗಮಿಸಿದರು. ಅವರನ್ನು ರಾಜ್ಯದ ಹಿರಿಯ ಭಾರತೀಯ ಜನತಾ ಪಕ್ಷದ ನಾಯಕರು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು.

ಶಾ ಅವರು ಪಾಟ್ನಾದಲ್ಲಿರುವ ಬಿಜೆಪಿ ಕಚೇರಿಗೆ ತೆರಳಿದ್ದು, ಅಲ್ಲಿ ಅವರು ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾದ ಭೇಟಿ ಇದಾಗಿದೆ.

ಶನಿವಾರ ನವದೆಹಲಿಯಲ್ಲಿ ನಡೆದ ‘ಭಾರತ್-ಶ್ರೇಷ್ಠ ಭಾರತ್ ಸ್ನೇಹ ಮಿಲನ್’ ಕಾರ್ಯಕ್ರಮದಲ್ಲಿ ಅವರು ಬಿಹಾರದ ಐತಿಹಾಸಿಕ ಮಹತ್ವ, ಅದರ ಪ್ರಗತಿ ಮತ್ತು ಬಿಜೆಪಿ ನಾಯಕತ್ವದಲ್ಲಿ ಅದು ಆಗಿರುವ ಪರಿವರ್ತನೆಗಳನ್ನು ಎತ್ತಿ ತೋರಿಸಿದರು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!