ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ ಯಾರಂದ್ರೆ ನೆನಪಾಗೋದು ರಶ್ಮಿಕಾ ಮಂದಣ್ಣ. ರಶ್ಮಿಕಾ ನಟಿಸಿ, ಬಿಡುಗಡೆ ಆಗಿರುವ ಕಳೆದ ಮೂರು ಸಿನಿಮಾಗಳು ದಾಖಲೆ ಮೊತ್ತದ ಹಣವನ್ನು ಬಾಕ್ಸ್ ಆಫೀಸ್ನಲ್ಲಿ ಗಳಿಕೆ ಮಾಡಿದೆ. ರಶ್ಮಿಕಾರ ಸಂಭಾವನೆ ಏರಿಕೆಯಾಗಿದ್ದು, ನಟಿಯ ಜೀವನ ಶೈಲಿಯಲ್ಲಿಯೂ ಕೂಡ ಬದಲಾವಣೆ ಆಗಿದೆ.
ಹೌದು, ರಶ್ಮಿಕಾ ಮಂದಣ್ಣ ಐಶಾರಾಮಿ ಮರ್ಸಿಡಿಸ್ ಎಸ್ 450 ಕಾರನ್ನು ಖರೀದಿ ಮಾಡಿದ್ದಾರೆ. ಸೆಡಾನ್ ಮಾದರಿಯ ಕಾರು ಇದಾಗಿದೆ. ಅಂದಹಾಗೆ ಕಾರಿನ ಬೆಲೆ ಸುಮಾರು 2.25 ಕೋಟಿ ರೂಪಾಯಿಗಳಿವೆ.
ಈ ಐಶಾರಾಮಿ ಕಾರಿನಲ್ಲಿ ಹಲವು ಅತ್ಯಾಧುನಿಕ ತಂತ್ರಜ್ಞಾನವಿದೆ. ಆರಾಮದಾಯಕ ಪ್ರಯಾಣಕ್ಕೆ ಸೀಟ್ ರಿಕ್ಲೈನರ್, ಇನ್ಬಿಲ್ಟ್ ಫ್ರಿಡ್ಜ್, ಹಿಂದಿನ ಸೀಟಿಗೆ ಟಿವಿ, ವಿಶಾಲವಾದ ಲೆಗ್ ರೂಂ, ಆಟೋಮ್ಯಾಟಿಕ್ ಡೋರ್ಗಳು, ಅತ್ಯುತ್ತಮ ಭದ್ರತೆ, ಹೀಟೆಡ್, ವೆಂಟಿಲೇಟೆಡ್ ಸೀಟ್ಗಳು ಇನ್ನೂ ಹಲವು ಅತ್ಯುತ್ತಮ ಸೌಲಭ್ಯಗಳು ಈ ಐಶಾರಾಮಿ ಕಾರಿನಲ್ಲಿದೆ.