Sunday, December 3, 2023

Latest Posts

ಜಮ್ಮು ಕಾಶ್ಮೀರದಲ್ಲಿ ನದಿಗೆ ಉರುಳಿದ ಮಿನಿ ಬಸ್‌; ಚಾಲಕ, ನಿರ್ವಾಹಕ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿನ್ನೆಯಷ್ಟೇ ಲಡಾಖ್‌ನ ತುರ್ತುಕ್ ಸೆಕ್ಟರ್‌ನಲ್ಲಿರುವ ಶ್ಯೋಕ್ ನದಿಗೆ 26 ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದು ಬಿದ್ದ ಪರಿಣಾಮ ಭಾರತೀಯ ಸೇನೆಯ ಕನಿಷ್ಠ ಏಳು ಯೋಧರು ಸಾವನ್ನಪ್ಪಿದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಕಣಿವೆ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಶುಕ್ರವಾರ ತಡರಾತ್ರಿ ಜಮ್ಮು ಕಾಶ್ಮೀರದಲ್ಲಿ ಮಿನಿ ಬಸ್‌ ಒಂದು ನಿಯಂತ್ರಣ ತಪ್ಪಿ ತಾವಿ ಸೇತುವೆಯಿಂದ ಉರುಳಿದ ಪರಿಣಾಮ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಜಮ್ಮು ಪೊಲೀಸರ ಪ್ರಕಾರ, ಶುಕ್ರವಾರ ತಡರಾತ್ರಿ ಈ ಘಟನೆ ನಡೆದಾಗ ವಾಹನ ಸೇತುವೆಯ ಮೂಲಕ ಹಾದು ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ನಂತರ ವಾಹನವು ಕೆಳಕ್ಕುರುಳಿದೆ. ಅಪಘಾತದಲ್ಲಿ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದಾರೆ. ವರದಿಯ ಪ್ರಕಾರ, ವಾಹನವು 40-50 ಅಡಿಗಳಷ್ಟು ಆಳದ ತಾವಿ ನದಿಗೆ ಉರುಳಿದೆ ಎಂದು ಜಮ್ಮು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಪೊಲೀಸರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನವನ್ನು ಮೇಲಕ್ಕೆತ್ತಿದರೂ ಬಸ್ ಒಳಗೆ ಸಿಕ್ಕಿಬಿದ್ದ ಇಬ್ಬರು ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!