ಬಾಯ್‌ ಫ್ರೆಂಡ್‌ಗಾಗಿ ಬಸ್‌ ನಿಲ್ದಾಣದಲ್ಲೇ ಹೊಡೆದಾಡಿದ ಯುವತಿಯರು: ಹುಡುಗ ಸ್ಥಳದಿಂದ ಪರಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ತಮ್ಮ ಒಬ್ಬನೇ ಬಾಯ್‌ ಫ್ರೆಂಡ್‌ ಗಾಗಿ ಇಬ್ಬರು ಹದಿಹರೆಯದ ಹುಡುಗಿಯರು ಸಾರ್ವಜನಿಕವಾಗಿ ಹೊಡೆದಾಡಿಕೊಂಡ ಘಟನೆ
ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಬಾಯ್‌ ಫ್ರೆಂಡ್‌ ಜೊತೆಗೆ ಇನ್ನೊಬ್ಬಳು 17 ವರ್ಷದ ಯುವತಿ ಪೈಠಾಣ್‌ನ ಬಸ್ ನಿಲ್ದಾಣದಲ್ಲಿರುವುದನ್ನು ತಿಳಿದ ಯುವತಿ ಅಲ್ಲಿಗೆ ಬಂದಿದ್ದಾಳೆ. ಅವನು ತನ್ನ ಹುಡುಗ ಎಂದು ಇಬ್ಬರು ಬಸ್ ನಿಲ್ದಾಣದಲ್ಲೇ ಕಿತ್ತಾಡಲಾರಂಭಿಸಿದ್ದಾರೆ. ಹುಡುಗನ ಕೈ ಹಿಡಿದು ಎಳೆದಾಡಿ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ. ಏತನ್ಮಧ್ಯೆ, ಹುಡುಗ ಹೊಡೆದಾಟದ ಸಮಯದಲ್ಲಿ ಸ್ಥಳದಿಂದ ಎಸ್ಕೇಪ್‌ ಆಗುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಯುವತಿಯರನ್ನು  ಪೊಲೀಸರು ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನಡೆಸಿ ಬಿಡುಗಡೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!