ಉತ್ತಮ ಆರೋಗ್ಯಕ್ಕೆ ಈ ಅಂಶ ಅಳವಡಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ರೋಗಗಳಿಗೆ ನಮ್ಮ ಆಹಾರ ಕ್ರಮಗಳೇ ಕಾರಣ ಎನ್ನುವುದು ವೈದ್ಯರ ಅಭಿಮತ. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವನೆ ಮಾಡದಿರುವುದುರಿಂದಲೇ ಅನಾರೋಗ್ಯಗಳು ಉಂಟಾಗುತ್ತವೆಯಂತೆ. ಬೆಳಗ್ಗಿನ ತಿಂಡಿ ಸರಿಯಾಗಿರುವುದು ಉತ್ತಮ ಆರೋಗ್ಯಕ್ಕೆ ಅತೀ ಅವಶ್ಯವೆನ್ನುತ್ತಾರೆ. ಬೆಳಗ್ಗಿನ ಉಪಾಹಾರ ಸೇವನೆ ಮಾಡದೇ ಇರುವುದು ಕೂಡಾ ಅನಾರೋಗ್ಯ ಉಂಟಾಗುವಂತೆ ಮಾಡುತ್ತದೆ. ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ಹೆಚ್ಚಿನ ನಾರಿನಂಶ ಹೊಂದಿರುವ ಆಹಾರ ಸೇವನೆ ಉತ್ತಮ.

ದೇಹದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಲು ಇದು ಸಹಕಾರಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಕೂಡಾ ದೇಹಾರೋಗ್ಯಕ್ಕೆ ಅನುಕೂಲ. ಧಾನ್ಯಗಳು, ನಾರಿನಂಶವಿರುವ ತರಕಾರಿ , ಹಣ್ಣುಗಳ ಸೇವನೆ ಅಧಿಕವಾಗಿರುವಂತೆ ನೋಡಿಕೊಳ್ಳುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!